×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಂಗಳೂರು ಉತ್ತರ;ಇನಾಯತ್ ಅಲಿ ಪರ ಮತದಾರರ ಒಲವು

ಸುರತ್ಕಲ್‌: ರಾಜಕೀಯವಾಗಿ ಸೂಕ್ಷ್ಮವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲಿನ ಮಂಗಳೂರು ಉತ್ತರ ಕ್ಷೇತ್ರ ಈ ಬಾರಿಯ ಚುನಾವಣೆಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆಇದಕ್ಕೆ ಕಾರಣ ಸಮಾಜಸೇವೆಯನ್ನೇ ಮೈಗೂಡಿಸಿಕೊಂಡಿರುವ ಇನಾಯತ್ ಅಲಿ ಎಂಬ ವ್ಯಕ್ತಿ, ಬಿಜೆಪಿ ಹಾಲಿ ಶಾಸಕ ಡಾ.ಭರತ್ ಶೆಟ್ಟಿಗೆ ಠಕ್ಕರ್ ನೀಡಲೆಂದೇ ಕಾಂಗ್ರೆಸ್ ಈ ಬಾರಿ ಇನಾಯತ್ ಅಲಿ ಎಂಬ ಸಚ್ಚಾರಿತ್ರ್ಯವಂತ, ಸರಳ ವ್ಯಕ್ತಿಯನ್ನು ಕಣಕ್ಕಿಳಿಸಿದೆ..ಕಳೆದ 7-8 ತಿಂಗಳಿನಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಗಲಿರುಳು ಪ್ರಚಾರ ನಡೆಸುವ ಮೂಲಕ ಅಭಿವೃದ್ಧಿಯ ಕನಸ ಕಾಣುತ್ತಿರುವ ಇನಾಯತ್ ಅಲಿ ಪರ ಈ ಬಾರಿ ಅಲೆ ಇದೆ ಎಂದು ಹೇಳುತ್ತಾರೆ ಈ ಭಾಗದ ಪ್ರಜ್ಞಾವಂತ ಮತದಾರರು.ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಸೇರಿರುವ ಮೊಯಿದಿನ್ ಬಾವಗೆ ಈ ಬಾರಿಯ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾತ್ರ ಎನ್ನುತ್ತಾರೆ ಮತದಾರರು. ಬಿಗ್ ಫೈಟ್ ಇರುವುದು ಬಿಜೆಪಿಯ ಭರತ್ ಶೆಟ್ಟಿ ಹಾಗು ಕಾಂಗ್ರೆಸಿನ ಇನಾಯತ್ ಅಲಿ ಮಧ್ಯೆ, ಹಿಂದುತ್ವವನ್ನೇ ಹಿಡಿದುಕೊಂಡು ಭರತ್ ಶೆಟ್ಟಿ ಈ ಬಾರಿ ಚುನಾವಣೆಗಿಳಿದಿದ್ದರೆ, ಇತ್ತ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಇನಾಯತ್ ಅಲಿ ಫೀಲ್ಡಿಗಿಳಿದಿದ್ದಾರೆ. ಬಂದರು, ಪ್ರಮುಖ ಕೈಗಾರಿಕೆಗಳಾದ ಎಂಆರ್‌ಪಿಎಲ್, ಒಎನ್‌ಜಿಸಿ, ಎಂಸಿಎಫ್ ಹಾಗೂ ಪ್ರವಾಸೋದ್ಯಮ ತಾಣಗಳನ್ನೂ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ಅಭಿವೃದ್ಧಿ ಕಾರ್ಯವೇ ನಡೆದಿಲ್ಲ ಎನ್ನುತ್ತಾರೆ ಇಲ್ಲಿನ ಮತದಾರರು.ಈ ಭಾಗದಲ್ಲಿ ಅಬ್ಬರದ ಪ್ರಚಾರ ಕಾರ್ಯ ಮಾಡಿ ಮುಗಿಸಿರುವ ಇನಾಯತ್ ಅಲಿ, ಈ ಬಾರಿಯ ಗೆಲುವು ನಮ್ಮದೇ, ನಮ್ಮ ಗೆಲುವಿಗೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಲ್ಲಿ ಹೇಳುತ್ತಾರೆ.

Leave a Reply

Your email address will not be published. Required fields are marked *