
ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಮಂಜುಶ್ರೀ ನಗರದ ಇಂದ್ರಾಳಿ ವಾರ್ಡ್ ನ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗುರುವಾರ 20/4/23 ರಂದು ನಡೆಯಿತು.
ಇದೇ ಸಂಧರ್ಭದಲ್ಲಿ ಸುಕೇಶ್ ನಾಯ್ಕ್, ಮತ್ತು ದೀಪಕ್ ಆಚಾರ್ಯ ಅವರನ್ನು ಕಾಂಗ್ರೆಸ್ ಪಕ್ಷದ ಬಾವುಟ ಕೊಡುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಸಭೆಯಲ್ಲಿ ಉಡುಪಿ ವಿ.ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ದಿವಾಕರ್ ಕುಂದರ್, ಗಣೇಶ್ ನೇರ್ಗಿ, ಲತಾ ಆನಂದ ಶೇರಿಗಾರ್, ಕುಶಲ್ ಶೆಟ್ಟಿ, ದಿನೇಶ್ ಪುತ್ರನ್,ಮುರಳಿ ಶೆಟ್ಟಿ, ದಿವಾಕರ ಕುಂದರ್,ಸತೀಶ್ ಕುಮಾರ್,ಮಹಾಬಲ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

