×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎಪ್ರಿಲ್ 17ರಂದು ಕಾಪು : ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಮಹಮ್ಮದ್ ಹನೀಫ್ ಮೂಳೂರು ನಾಮ ಪತ್ರ ಸಲ್ಲಿಕೆ

ಕಾಪು : ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಮಹಮ್ಮದ್ ಹನೀಫ್ ಮೂಳೂರು ಅವರು ಎಪ್ರಿಲ್ 17ರಂದು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಎಸ್ ಡಿ ಪಿ ಐ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಬ್ದುಲ್ ರಝಾಕ್ ವೈ ಎಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 10ಕ್ಕೆ ಕಾರ್ಯಕರ್ತರು,ಹಿತೈಷಿಗಳೊಂದಿಗೆ ಹೆಜಮಾಡಿಯಿಂದ ಪಡುಬಿದ್ರಿ ,ಕಂಚಿನಡ್ಕ ,ಉಚ್ಚಿಲ , ಮೂಳೂರು,ಬೆಳಪು , ಮಜೂರು, ಮಾರ್ಗವಾಗಿ ಬೈಕ್ ರ‌್ಯಾಲಿಯ ಮೂಲಕ ಹನೀಫ್ ಮೂಳೂರು ರವರು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ಮಹಮ್ಮದ್ ಹನೀಫ್ ಮೂಳೂರು ಅವರಂತಹ ನಾಯಕರನ್ನು ವಿಧಾನಸೌಧಕ್ಕೆ ಕಳಿಸಲು ಕಾಪು ಜನತೆ ಈ ಬಾರಿ ಒಮ್ಮತದ ತೀರ್ಮಾನ ಮಾಡಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *