
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಮತ್ತು ಸರಕಾರಿ ಇಂಜಿನೀಯರಿಂಗ್ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (S.F.I) ದ.ಕ ಜಿಲ್ಲಾ ಸಮಿತಿ ಇಂದು (28-3-2023) ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ನಿಯೋಗದಲ್ಲಿ ಎಸ್. ಎಫ್. ಐ ದ.ಕ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ನಗರ ಅಧ್ಯಕ್ಷರಾದ ಶಾಹಿದ್ ಅಫ್ರೀದ್, ಜಿಲ್ಲಾ ಮುಖಂಡರುಗಳಾದ ಸ್ಟಾನಿ ಪ್ರೀತಮ್, ಸುಪ್ರೀಯಾ, ರೇಣುಕಾ, ಮಾಹಿರ್ ಮುಂತಾದವರು ಉಪಸ್ಥಿತರಿದ್ದರು.

