×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸರಕಾರಿ ನೌಕರ ಮುಷ್ಕರ ಹಾಸ್ಯಸ್ಪದ ಸಾಮಾಜಿಕ ಹೋರಾಟಗಾರ ಶೇಖರ್ ಹೆಜಮಾಡಿ

ದೇಶದ ಕೋಟ್ಯಾಂತರ ವಿದ್ಯಾವಂತ ನಿರುದ್ಯೋಗಿಗಳು ಬದಕು ಕಟ್ಟಿಕೊಳ್ಳಲು ಉದ್ಯೋಗಕ್ಕಾಗಿ ಹರಸಾಹಸ ಪಡುವ ಸ್ಥಿತಿಯಲ್ಲಿರುವಾಗ ಪ್ರಮಾಣಿಕ ಸೇವೆ ನೀಡುವ ನಿಟ್ಟಿನಲ್ಲಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡು ಪ್ರಮಾಣ ಮಾಡಿ ಸರಕಾರದಿಂದ ಉತ್ಕ್ರುಷ್ಠ ಮಟ್ಟದ ವೇತನ ಹಾಗೂ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದು ಮತ್ತೆ ಸರಕಾರದ ಖಜಾನೆಯಿಂದ ಬೇಡಿಕೆಯನ್ನು ಮುಂದಿಟ್ಟಿರುವುದು ಹಾಸ್ಯಾಸ್ಪದ .
ಸರಕಾರದ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಡುತ್ತಿದ್ದು ಸರಕಾರಿ ನೌಕರರು ಹಸಿದ ಹೊಟ್ಟೆಯಲ್ಲಿ ಕಂಗಾಲಾಗಿರುವ ಕಟ್ಟ ಕಡೆಯ ಜನಗಳ ದುಸ್ಥಿತಿಯನ್ನು ಹಾಗೂ ದೇಶದ ಆರ್ಥಿಕ ಸ್ಥಿತಿ , ಬಡತನ, ನಿರುದ್ಯೋಗದ ಬಗ್ಗೆ ಚಿಂತೆ ಮಾಡಲಿ . ಸರಕಾರಿ ನೌಕರರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದು, ವಾರ್ಷಿಕ ಪರೀಕ್ಷಾ ಸಮಯವಾಗಿರುವುದರಿಂದ ಬಡ ವಿದ್ಯಾರ್ಥಿಗಳ ಸಂವಿಧಾನ ಬದ್ಧ ಶೈಕ್ಷಣಿಕ ಹಕ್ಕುಗಳಿಗೆ ತೊಡುಕನ್ನು ಉಂಟು ಮಾಡುತ್ತಿರುವುದು ವಿಷಾದನೀಯ ಸರಕಾರ ಯಾವುದೇ ಕಾರಣಕ್ಕೂ 7ನೇ ವೇತನ ಆಯೋಗ ಹಾಗೂ ಓಪಿಎಸ್ ಜಾರಿಯಾಗದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು . ಚುಣಾವಣೆಯನ್ನು ನೆಪವಾಗಿ ಇಟ್ಟುಕೊಂಡು ಸರಕಾರಿ ನೌಕರರು ತಮ್ಮ ಬೇಡಿಕೆಯ ಬೇಳೆ ಬೇಯಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ , ಸರಕಾರಿ ನೌಕರರ ಮುಷ್ಕರ ಮುಂದುವರಿದಲ್ಲಿ ಏಸ್ಮಾ ಕಾಯ್ದೆಯನ್ನು ಜಾರಿ ಮಾಡಿ ವಿದ್ಯಾವಂತ ನಿರುದ್ಯೋಗಿ ಯುವ ಜನತೆಯನ್ನು ಸರಕಾರಿ ನೌಕರರಾಗಿ ನೇಮಿಸಿಕೊಳ್ಳುವಂತೆ ದಿಟ್ಟ ಕ್ರಮ ಜರಗಿಸುವಂತೆ ಸಾಮಾಜಿಕ ಹೋರಾಟಗಾರ ಶೇಖರ್ ಹೆಜಮಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *