
ಪಡುಬಿದ್ರೆ: ಪರಸ್ಪರ ಹೊಡೆದಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಎರಡು ತಂಡಗಳ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಜ್ಞಾನ್ ಆರ್ ಆರ್ ಕಾಲನಿ ನಿವಾಸಿ ಶಿವಪ್ರಕಾಶ್ ನೀಡಿದ ದೂರಿನಲ್ಲಿ ರವಿವಾರ ರಾತ್ರಿ ಪಡುಬಿದ್ರೆಯ ಖಡೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಪೂಜೆಗೆ ಸಹೋದರ ಆದರ್ಶ್ ಹಾಗೂ ಇಬ್ಬರು ಸ್ನೇಹಿತರಾದ ಪ್ರತೀಕ್ ಮತ್ತು ಧನುಷ್ ಎಂಬವರೊಂದಿಗೆ ಹೋಗಿದ್ದು, ಮೂತ್ರ ವಿಸರ್ಜನೆಗೆಂದು ಹೋದ ಸಮಯ ಅಲ್ಲಿಗೆ ಬಂದ ವಸಂತ ಹಾಗೂ ಬಾಲುರವರು ಹಲ್ಲೆ ನಡೆಸಿ, ಬೆದರಿಕೆ ಒಡ್ಡಿರುವ ಬಗ್ಗೆ ದೂರು ನೀಡಿದ್ದಾರೆ. ಇನ್ನೊಂದು ದೂರಿನಲ್ಲಿ ಎರ್ಮಾಳು ತೆಂಕ ನಿವಾಸಿ ನವೀನ್ ಪಡುಬಿದ್ರೆಯ ಖಡೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಅವರ ಸ್ನೇಹಿತರಾದ , ದಿವಾಕರ, ಬಾಲಕೃಷ್ಣ ರಾಕೇಶ್ ಎಂಬವರ ಜೊತೆಗೆ ಹೋಗಿದ್ದು, ಈ ವೇಳೆ ಕಂಚಿನಡ್ಕ ನಿವಾಸಿ ಶಿವಪ್ರಕಾಶ್ ಎಂಬಾತನು ತಡೆದು ನಿಲ್ಲಿಸಿ ವಸಂತ ಎಲ್ಲಿದ್ದಾನೆ ಎಂದು ಕೇಳಿ, ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.

