×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೆಳ್ಳೆ ಗ್ರಾ. ಪಂ 3 ಕೋಟಿ 35 ಲಕ್ಷ ಅನುದಾನ : ಶಾಸಕ ಲಾಲಾಜಿ ಮೆಂಡನ್

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 35 ಲಕ್ಷ ರೂಗಳ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ ಗಳಲ್ಲಿ ಹೆಚ್ಚಿನ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಈಗಾಗಲೇ 40 ಕೋಟಿ ಅನುದಾನಗಳ ಮುಖಂತರ ಪ್ರತಿ ರಸ್ತೆಗಳನ್ನು, ಶಾಲಾ ಕಾಲೇಜು, ದೇವಸ್ಥಾನ ದೈವಸ್ಥಾನಗಳಿಗೆ ಹೆಚ್ಚಿನ ಮೊತ್ತದ ಅನುದಾನ ಒದಗಿಸಲಾಗಿದೆ. ಈ ಭಾಗದ ಜನರ ಬಹುಬೇಡಿಕೆಯ ನಿಟ್ಟೂಲ್ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಪಡುಬೆಳ್ಳೆ ಪಡುಮನೆ ರಸ್ತೆ ಅಭಿವೃದ್ಧಿಗೆ 1 ಕೋಟಿ, ಪಡುಬೆಳ್ಳೆ ಶಿವಗಿರಿ ಸಡಂಬೈಲ್ ರಸ್ತೆ 1 ಕೋಟಿ ರೂ, ಕಪ್ಪಂದಕರಿಯ ಬಳಿ ಸೇತುವೆ ನಿರ್ಮಾಣ 90 ಲಕ್ಷ, ಎಡಮೇರು ತಾಕಡಬೈಲು ರಸ್ತೆ ಅಭಿವೃದ್ಧಿ 10 ಲಕ್ಷ, ಅರ್ಧರ್ ಬೆಟ್ಟು ರಸ್ತೆ ಅಭಿವೃದ್ಧಿಗೆ 10 ಲಕ್ಷ ಒದಗಿಸಲಾಗಿದ್ದು. ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳ್ಳೆಯ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಧಾಕರ್ ಪೂಜಾರಿ, ಉಪಾಧ್ಯಕ್ಷರು ಸಂದ್ಯಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪರಶುರಾಮ್ ಭಟ್, ಹರೀಶ್ ಶೆಟ್ಟಿ, ಗುರುರಾಜ್ ಭಟ್, ಶಶಿಧರ್ ವಾಗ್ಲೆ,ಸಂತೋಷ್, ಮೇರಿ ಡಿಸೋಜ, ರಕ್ಷಿತಾ ಪೂಜಾರಿ, ಪ್ರೇಮ, ದಿವ್ಯ ಆಚಾರ್ಯ, ಶ್ರೀಮತಿ ಶೆಟ್ಟಿ, ಶಿಲ್ಪಾ, ಅಮಿತಾ, ಸ್ಥಳೀಯ ಮುಖಂಡರಾದ ರಾಜೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಐವನ್ ಹಾಗೂ ಗುತ್ತಿಗೆದಾರರು ಸಂದೀಪ್ ಶೆಟ್ಟಿ, ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *