
ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ವತಿಯಿಂದ ಫೆಬ್ರವರಿ 12 ರಂದು “ಮಣಿಪಾಲ್ ಮ್ಯಾರಥಾನ್” ನಡೆಯಲಿದ್ದು, ಇಂದು ದಿನಾಂಕ 16-01-2023 ರಂದು ಮಾಹೆ ಮಣಿಪಾಲದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಉಪಕುಲಾಧಿಪತಿಗಳಾದ ಶರತ್ ರಾವ್, ಮಾಹೆ ಮಣಿಪಾಲದ ಕ್ರೀಡಾ ಕಾರ್ಯದರ್ಶಿಗಳಾದ ಡಾ. ವಿನೋದ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಕೆಂಪರಾಜ್, ಉಪಾಧ್ಯಕ್ಷರಾದ ಹರಿಪ್ರಸಾದ್ ರೈ, ಬೆಂಗಳೂರು ಎನ್.ಇ.ಬಿ ಕ್ರೀಡಾ ನಿರ್ದೇಶಕರಾದ ನಾಗರಾಜ್ ಅಡಿಗ, ಮಾಹೆ ಮಣಿಪಾಲದ ಕ್ರೀಡಾ ಜಂಟಿ ಕಾರ್ಯದರ್ಶಿ ಶೋಭಾ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ದಿನೇಶ್ ಕುಮಾರ್, ಕೋಶಾಧಿಕಾರಿಗಳಾದ ದೀಪಕ್ ರಾಮ್ ಬಾಯಾರಿ, ಸದಸ್ಯರಾದ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.

