×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಫುಟ್ಬಾಲ್ ದಂತಕತೆ ಪೀಲೆ ಇನ್ನಿಲ್ಲ

ಬ್ರೆಜಿಲಿಯನ್ ಫುಟ್ಬಾಲ್ ಮಾಜಿ ಆಟಗಾರ ಪೀಲೆ ಇನ್ನಿಲ್ಲ. ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೇ ಖ್ಯಾತರಾಗಿದ್ದ ಪೀಲೆ ತಮ್ಮ 82ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಗುರುವಾರ ತಿಳಿಸಿದ.ಫುಟ್ಬಾಲ್‌ನ ಮಾಸ್ಟರ್ ಮೈಂಡ್ ಎನಿಸಿದ್ದ ಅವರು ಮೂರು ಬಾರಿ ವಿಶ್ವಕಪ್ ಗೆದ್ದಿದ್ದರು ಫಾರ್ವಡ್್ರ ಮತ್ತು ಅಟ್ಯಾಕಿಂಗ್ ಮಿಡ್‌ಫೀಲ್ಡರ್ ಆಟಗಾರರಾಗಿದ್ದ ಪೆಲೆ, 1995-1998ರ ಅವಧಿಯಲ್ಲಿ ದೇಶದ ಕ್ರೀಡಾ ಸಚಿವರಾಗಿದ್ದರು. ವಿಶ್ವಕಪ್ ಟೂರ್ನಿಗಳ 14 ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದ್ದರು ಕರುಳಿನ ಕ್ಯಾನ್ನರ್‌ನಿಂದ ಬಳಲುತ್ತಿದ್ದ ಅವರು ಕೀಮೋಥೆರಪಿ ಬಳಿಕ ಶ್ವಾಸಕೋಶ ಸೋಂಕಿನಿಂದ ಉಸಿರಾಟದ ತೊಂದರೆ ಅನುಭವಿಸಿದ್ದರು. ಮೂರು ಬಾರಿ ವಿವಾಹವಾಗಿದ್ದ ಪೀಲೆ ಅವರಿಗೆ ಒಟ್ಟು 7 ಮಕ್ಕಳಿದ್ದಾರೆ. “ನಾವೆಲ್ಲರೂ ನಿಮಗೆ ಧನ್ಯವಾದಗಳು. ನಾವು ನಿನ್ನನ್ನು ಅನಂತವಾಗಿ ಪ್ರೀತಿಸುತ್ತೇವೆ.ಶಾಂತಿಯಿಂದ ವಿಶ್ರಾಂತಿ ಪಡೆಯಿರಿ’ ಎಂದು ಮಗಳು ಕಲಿ ನಾಸಿಮೆಂಟೋ Instagram ನಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 25, 1940 ರಂದು ಬ್ರೆಜಿಲ್‌ನ ಟ್ರೆಸ್ ಕೊರಾಸ್‌ನಲ್ಲಿ ಜನಿಸಿದ ಪೀಲೆ 95 ಪಂದ್ಯಗಳಲ್ಲಿ 77. ಗೋಲುಗಳೊಂದಿಗೆ ಸಲೆಕಾವೊ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದರು. ಶ್ರೇಷ್ಠ ಆಟಗಾರ ಪೀಲೆ ಅವರ ನಿಧನಕ್ಕೆ ಜಗತ್ತಿನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ

 

Leave a Reply

Your email address will not be published. Required fields are marked *