
ಉಡುಪಿ: ಹೂಡೆಯ ಸಾಲಿಹಾತ್ ಸಮೂಹ ಸಂಸ್ಥೆಯ ಟ್ರಸ್ಟಿಗಳಾದ ಕಾಸೀಮ್ ಸಾಹೇಬ್ ನಿಧನರಾಗಿದ್ದಾರೆ. ಇವರು ಎಸ್.ಐ.ಓ ಹೂಡೆ ಘಟಕದ ಪ್ರಥಮ ಅಧ್ಯಕ್ಷರಾಗಿದ್ದರು. ಮಹಮ್ಮದೀಯ ಎಜುಕೇಷನಲ್ ಟ್ರಸ್ಟ್ ಆರಂಭದಿಂದಲೂ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಪತ್ನಿ, ಆರು ಮಂದಿ ಪುತ್ರರು, ಒರ್ವರ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ರಾತ್ರಿ 8 ಗಂಟೆಗೆ ಜದೀದ್ ಜಾಮಿಯಾ ಮಸೀದಿಯಲ್ಲಿ ನಡೆಯಲಿದೆ.

