
ಕಾಪು : ರಾಜೀವ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕ್ರಿಸ್‌ಮಸ್ ಹಬ್ಬವನ್ನು ಸರ್ವಧರ್ಮಿಯರು ಸೇರಿ ಅರ್ಥಪೂರ್ಣವಾಗಿ. ಕೇಕ್ ಕತ್ತರಿಸುವ ಮೂಲಕ ಆಚರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷ ಕೂಡ ಸರ್ವಧರ್ಮಗಳ ಬೀಡು. ಇಲ್ಲಿ ಯಾವುದೇ ಜಾತಿ ಧರ್ಮಗಳ ಕಟ್ಟುಪಾಡುಗಳಿಲ್ಲ. ಹಿಂದುಗಳ ಹಬ್ಬ ದೀಪಾವಳಿಯನ್ನು ಎಲ್ಲ ಧರ್ಮೀಯರು ಒಂದಾಗಿ ಆಚರಿಸಿದರೆ, ಅದೇ ರೀತಿ ಮುಸ್ಲಿಮರು ಹಾಗೂ ಕ್ರೈಸ್ತರ ಹಬ್ಬವನ್ನು ಎಲ್ಲರೂ ಒಂದಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು. ಕ್ರಿಸ್‌ಮಸ್ ಹಬ್ಬದ ಬಗ್ಗೆ ಕ್ರೈಸ್ತ ಸದಸ್ಯರಿಂದ ಕ್ರಿಸ್‌ಮಸ್ ಬಗೆಗಿನ ಹಾಡು ಹೇಳಿ ಸಿಹಿತಿಂಡಿ ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಕಾಂಗ್ರೆಸ್ ಪ್ರಮುಖರಾದ-ಪ್ರಶಾಂತ್ ಜತ್ತನ್ನ ಸರ್ಪುದ್ದೀನ್ ಶಿವಾಜಿ ಸುವರ್ಣ, ಗಣೇಶ್ ಕೋಟ್ಯಾನ್ ರಮೀಜ್ ಹುಸೇನ್, ಗೀತಾ ವಾಗೈ, ಐಡಾ ಗಿಬ್ಬಡಿಸೋಜ,ದೀಪಕ್ ಎರ್ಮಾಳ್ ಮೊಹಮ್ಮದ್ ಅಮೀರ್ ಪ್ರಭಾಕರ ಆಚಾರ್ಯ ಉಸ್ಮಾನ್ ಕಾಪು ದೀಪಕ್ ಎರ್ಮಾಳ್ ಶಾಂತಲಾ ಶೆಟ್ಟಿ ಆಗ್ನೇಸ್ ಡೇಸ ಮತ್ತಿತರರು ಉಪಸ್ಥಿತರಿದ್ದರು.

