×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ :ಗೋಪಾಲ್ ಭಂಡಾರಿಯವರ ಸ್ಮರಣಾರ್ಥ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಸೌಹಾರ್ದ ಟ್ರೋಫಿ-2022

ಕಾರ್ಕಳದ ಮಾಜಿ ಶಾಸಕ ದಿ. ಹೆಚ್ ಗೋಪಾಲ್ ಭಂಡಾರಿಯವರ ಸ್ಮರಣಾರ್ಥ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಸೌಹಾರ್ದ ಟ್ರೋಫಿ- 2022” ಯನ್ನು ಡಿಸೆಂಬರ್ 16,17,18 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಉಡುಪಿ ಮತ್ತು ದ.ಕ ಜಿಲ್ಲೆಯ ಬಲಿಷ್ಠ 32 ತಂಡಗಳು ಭಾಗವಹಿಸಲಿದ್ದು ವಿಜೇತರಿಗೆ ಪ್ರಥಮ‌ ನಗದು ರೂ 1,00,000/ ದ್ವಿತೀಯ‌ ನಗದು ರೂ 60,000/ ತೃತೀಯ ನಗದು ರೂ 15,000/ ಚತುರ್ಥ ನಗದು ರೂ 10,000/ ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಕ್ರೀಡಾಕೂಟದ ಸರಣಿ‌ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ನಗದು ಮತ್ತು ಟ್ರೋಫಿ, ಮತ್ತು ಅನೇಕ ಆಕರ್ಷಕ ಬಹುಮಾನಗಳನ್ನು‌ ಘೋಷಿಸಲಾಗಿದೆ. ಪಕ್ಷಾತೀತವಾಗಿ ನಡೆಯುವ ಈ ಕ್ರೀಡಾಕೂಟದ ಸಮಾರಂಭದಲ್ಲಿ ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಕ್ರೀಡಾ ಸಾಧಕರು ಮತ್ತು ಗೋಪಾಲ್ ಭಂಡಾರಿಯವರ ಅಭಿಮಾನಿ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಕ್ರೀಡಾಕೂಟದ ಆಯೋಜಕರಾಗಿರುವ ಪುರಸಭಾ ಸದಸ್ಯ ಶುಭದರಾವ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *