×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಜಿಲ್ಲೆಯ ಎಲ್ಲಾ ಕೆಎ 20 ವಾಹನಗಳಿಗೆ ಉಚಿತ ಪ್ರವೇಶಕ್ಕೆ ಪ್ರಸ್ತಾಪ

ಉಡುಪಿ ಜಿಲ್ಲೆಯ ಎಲ್ಲಾ ಕೆಎ 20 ವಾಹನಗಳಿಗೆ ರಿಯಾಯಿತಿ ಕೊಡಬೇಕು, ಜಿಲ್ಲೆಯ ವಾಹನಗಳಿಗೆ ಹೆಚ್ಚುವರಿ ಟೋಲ್ ಸಂಗ್ರಹ ಮಾಡಬಾರದು, ಸುರತ್ಕಲ್ ಟೋಲ್ ಶುಲ್ಕ ಸಂಗ್ರಹ ಬಗ್ಗೆ ದೆಹಲಿಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.ಸುರತ್ಕಲ್ ಟೋಲ್ ರದ್ದು ಪಡಿಸಿ ಅದನ್ನು ಹೆಜಮಾಡಿ ಟೋಲ್ ಜೊತೆ ವಿಲೀನ ಮಾಡಿ ದುಪ್ಪಟ್ಟು ಶುಲ್ಕ ಸಂಗ್ರಹ ಪ್ರಸ್ತಾವನೆ ಸಭೆಯು ಉಡುಪಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ನಡೆಯಿತು. ಮಾತನಾಡಿದ ಸಚಿವ ಸುನಿಲ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಪ್ಪಿನಿಂದ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.ಸುರತ್ಕಲ್ ಟೋಲ್ ರದ್ದು ಮಾಡುವ ವೇಗದಲ್ಲಿ ದರ ಹೆಚ್ಚು ಮಾಡಿ ಹೆಜಮಾಡಿ ಮೇಲೆ ವರ್ಗಾಯಿಸಲಾಗಿದೆ. ಶಾಸಕ ರಘುಪತಿ ಭಟ್ ಈಗಾಗಲೇ ಈ ಬಗ್ಗೆ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಿದ್ದಾರೆ.ಮುಂದಿನ ವಾರ ಮುಖ್ಯಮಂತ್ರಿಗಳ ಜೊತೆ ನಾವೆಲ್ಲಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಸುರತ್ಕಲ್ ಟೋಲ್ ಅಕ್ರಮ ಎಂದು ನಾವು ಯಾವತ್ತೂ ಹೇಳಿಲ್ಲ. 2035 ರವರೆಗೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳಿವೆ.ಹೀಗಾಗಿ ಸುರತ್ಕಲ್‌ನಲ್ಲಿ ನಡೆದ ಒತ್ತಡದ ಕಾರಣಕ್ಕೆ ಪಕ್ಕದ ಹೆಜಮಾಡಿ ಮೇಲೆ ಟೋಲ್ ಹೊರೆ ಹೊರಿಸಲಾಗಿದೆ.ಯಾವುದೇ ಸೂಕ್ತ ನಿರ್ಧಾರವಾಗುವ ತನಕ ಹೆಚ್ಚುವರಿ ಟೋಲ್ ಸಂಗ್ರಹಿಸಬಾರದು ಅನ್ನುವ ಬೇಡಿಕೆಯೊಂದಿಗೆ ದೆಹಲಿ ಮಟ್ಟದಲ್ಲಿ ಎಲ್ಲಾ ಜನಪ್ರತಿನಿಧಿಗಳು ಚರ್ಚಿಸುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು 

video link 

https://youtu.be/u21boXM_gFE

Leave a Reply

Your email address will not be published. Required fields are marked *