ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ,ಸಂಸ್ಥೆಯ ವತಿಯಿಂದ ಆದಿತ್ಯವಾರ ಕಟಪಾಡಿ ಸುಭಾಷ್ ನಗರದ ಥಂಡರ್ಸ್ ಗ್ರಾಂಡ್ ಬೇ ಸಭಾಂಗಣದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಕೂಟ “ಕೊಂಪಿಟ್ -3.0,” ಆಯೋಜನೆ ಮಾಡಲಾಗಿತ್ತು. ಈ ಸಂದರ್ಭ ನೆರೆ ರಾಜ್ಯದ ಹಲವಾರು ಶಾಲೆಗಳಿಂದ ಸುಮಾರು ಸಾವಿರದ ಐನೂರು ಕರಾಟೆ ವಿದ್ಯಾರ್ಥಿ ಗಳು ಭಾಗವಹಿದ್ದರು. ಈ ಸಂದರ್ಭದಲ್ಲಿ ಮಾತನಾಡಿ ಯಶಪಲ್ ಸುವರ್ಣ ಇಂಥಹ ರಾಷ್ಟ್ರೀಯ ಕ್ರೀಡೆ ಗಳಿಂದ ಮಕ್ಕಳ ಭವಿಷ್ಯ ಉಜ್ವಲ ಗೊಳ್ಳುವುದು. ಕರಾಟೆಯಂಥಹ ಕ್ರೀಡೆಯಲ್ಲಿ ಭಾಗವಹಿಸುವುದರ ಮೂ ಲಕ ಮಕ್ಕಳ ಮಾನಸಿಕ ಬೆಳವಣಿಗೆ ಗೊಳ್ಳುವ ಮೂಲಕ ಶಾಲಾ ಕಲಿಕೆ ಗೆ ಸಹಾಯ ವಾಗುವುದು. ಇದೇ ರೀತಿಯಲ್ಲಿ ಹಳ್ಳಿ ಹಳ್ಳಿ ಗಳಿಂದ ಕರಾಟೆ ಪಟುಗಳು ಹೊರಹೊಮ್ಮುವುದರಿಂದ ಮುಂದಿನ ದಿನಗಳಲ್ಲಿ ಕರಾಟೆ ಮೂಲಕ ನಮ್ಮ ರಾಜ್ಯ ವಿಶ್ವದಲ್ಲೇ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ ಎಂದು ಯಶ್ ಪಾಲ್ ಸುವರ್ಣ ಹೇಳಿದರು. ಅವರು ಉಡುಪಿ ಜಿಲ್ಲೆಯ ಕಟಪಾಡಿ ಸುಭಾಶ್ ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಯನ್ನು ಉದ್ಘಾಟಸಿ ಮಾತನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯತೀಶ್ ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಯಶ್ ಪಾಲ್ .ಎ ಸುವರ್ಣ,ನವೀನ್ ಅಮೀನ್ ಶಂಕರಪುರ ಇವರ ಮಾರ್ಗದರ್ಶನ ದಲ್ಲಿ ಕರಾಟೆ ಶಿಕ್ಷಕ ರವಿ ಸಾಲ್ಯಾನ್ ನೇತ್ರತ್ವದಲ್ಲಿ ರಾಷ್ಟ್ರ ಮಟ್ಟದ ಒಂದು ದಿನ ದ ಪಂದ್ಯಾಕೂಟ ಜರಗಲಿದೆ. ಈ ಪಂದ್ಯಾಕೂಟ ದಲ್ಲಿ ರಾಜ್ಯದ ಅಲ್ಲದೆ ನೆರೆಯ ಗೋವಾ,ಮಹಾರಾಷ್ಟ್ರ, ಕೇರಳ ರಾಜ್ಯಗಳ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಯಶ್ ಪಾಲ್ ಎ.ಸುವರ್ಣ,ನವೀನ್ ಅಮೀನ್ ಶಂಕರಪುರ, ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಸಲಹೆ ಗಾರ ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

