×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕುತ್ಯಾರು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 3 ಕೋಟಿ 27 ಲಕ್ಷ ರೂ ಅನುದಾನ

[1:48 PM, 10/19/2022] P A Lalagi: ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕುತ್ಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 27 ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 19 ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 3 ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಕುತ್ಯಾರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಜನಪ್ರತಿನಿದಿಗಳು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಈಗಾಗಲೇ 5.33 ಕೋಟಿ ಅನುದಾನ ಹಾಗೂ ಈ ಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುತ್ಯಾರು ಇದರ ನೂತನ ಕಟ್ಟಡ ನಿರ್ಮಾಣಕ್ಕೆ 18 ಕೋಟಿ ರೂಗಳನ್ನು ಒದಗಿಸಲಾಗಿದೆ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಿಲ್ಪಾ ಜಿ ಸುವರ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಎಸ್ ಆಚಾರ್ಯ, ಉಪಾಧ್ಯಕ್ಷರು ರಾಜಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಭಟ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಶಿಪ್ರಭಾ, ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಆಚಾರ್ಯ, ಗಣೇಶ್ ಶೆಟ್ಟಿ ಪಯ್ಯರು, ಸಂಪತ್ ಪೂಜಾರಿ, ಶೈಲೇಶ್, ದಿವ್ಯ ಶೆಟ್ಟಿಗಾರ್, ಭಾರತಿ, ಎವುಜಿನ್ ಲೋಬೊ, ಅಗ್ನೇಯಸ್ ಮಥಯಸ್, ಸ್ಥಳೀಯ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಪ್ರಸಾದ್ ಶೆಟ್ಟಿ ಕುತ್ಯಾರು, ಧೀರಜ್ ಶೆಟ್ಟಿ, ನವೀನ್ ಶೆಟ್ಟಿ, ವೈ. ಎಸ್ ಭಂಡಾರಿ, ಅಶೋಕ್ ರಾವ್, ಶ್ರೀಕರ ಮಾಸ್ಟರ್, ಪ್ರದೀಪ್ ರಾವ್, ಸದಾಶಿವ ಆಚಾರ್ಯ, ಸುರೇಶ್, ಹರೀಶ್ ಆಚಾರ್ಯ, ರಾಘವೇಂದ್ರ ಹಾಗೂ ಸ್ಥಳೀಯರು, ಗುತ್ತಿಗೆದಾರರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

ಉದ್ಘಾಟನೆ/ಶಿಲಾನ್ಯಾಸಗೊಂಡ ರಸ್ತೆಗಳು
1. ಸೂರ್ಕಳ ರಸ್ತೆ ಅಭಿವೃದ್ಧಿ 50 ಲಕ್ಷ
2. ಕಳತ್ತೂರು ಶಾಂತಿಗುಡ್ಡಯಿಂದ ನಟ್ಟಿಲ್ ಸಂಪರ್ಕ ರಸ್ತೆ ಅಭಿವೃದ್ಧಿ 50 ಲಕ್ಷ
3. ಕಳತ್ತೂರು ಶಾಂತಿಗುಡ್ಡಯಿಂದ ಗೋಳಿಬೆಟ್ಟುವಿಗೆ ಹೋಗುವ ರಸ್ತೆ ಅಭಿವೃದ್ಧಿ 25 ಲಕ್ಷ
4. ಕರ್ಮಾರ್ ಜೆಡ್ಡು ರಸ್ತೆ ಅಭಿವೃದ್ಧಿ 20 ಲಕ್ಷ
5. ಕಂಜನ್‌ರಸ್ತೆ ಅಭಿವೃದ್ಧಿ-20 ಲಕ್ಷ
6. ನಡಿಗುತ್ತು ರಸ್ತೆ ಅಭಿವೃದ್ಧಿ – 20 ಲಕ್ಷ
7. ಕುತ್ಯಾರುಗುತ್ತು ಅಂಜಾರು ಮನೆ ರಸ್ತೆ ಅಭಿವೃದ್ಧಿ
8. ಸಾಗು ರಸ್ತೆ ಅಭಿವೃದ್ಧಿ -15 ಲಕ್ಷ
9. ಕಳತ್ತೂರು ಮುಖ್ಯ ರಸ್ತೆಯಿಂದ ಶ್ರೀಕರ ಮಾಸ್ಟರ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ 10 ಲಕ್ಷ
10. ಕಳತ್ತೂರು ಮುಖ್ಯ ರಸ್ತೆಯಿಂದ ಬಬ್ಬು ಸಾನದವರೆಗಿನ ರಸ್ತೆ ಅಭಿವೃದ್ಧಿ 10 ಲಕ್ಷ
11. ಕಳತ್ತೂರು ಸೂರ್ಯನಗರ ಕಲನಿ ರಸ್ತೆ ಅಭಿವೃದ್ಧಿ – 10 ಲಕ್ಷ
12. ಬ್ರಹ್ಮಸ್ಥಾನ ಮೂಲದಬೆಟ್ಟು ರಸ್ತೆ ಅಭಿವೃದ್ಧಿ 10 ಲಕ್ಷ
13. ನಡಿಗುತ್ತು ನವೀನ್ ಶೆಟ್ಟಿ ಮನೆಯಿಂದ ಏಲೇರಿಯನ್ ನಜ್ರತ್ ಮನೆವರೆಗಿನ ರಸ್ತೆ ಅಭಿವೃದ್ಧಿ 10 ಲಕ್ಷ
14. ಪುಂಚಲಕಾಡು ಬಳಿ ರಸ್ತೆ ಬಡಕಲ್ಲು ನಾಗ ಮೂಲಸ್ಥಾನ ಸನ್ನಿಧಿ ರಸ್ತೆ ಅಭಿವೃದ್ಧಿ 10 ಲಕ್ಷ
15. ಪೈಯಾರು ಸ್ಮಶನದಿಂದ 3 ಸೆಂಟ್ಸ್ ಕಾಲನಿ ರಸ್ತೆ ಅಭಿವೃದ್ಧಿ 10 ಲಕ್ಷ
16. ಕರ್ಮಾರು ಜೆಡ್ಡು ಚಂದ್ರ ಟೈಲರ್ ಮನೆ ಬಳಿ ಕಾಲು ಸಂಕ ನಿರ್ಮಾಣ 5 ಲಕ್ಷ
17.ಹೇಮಂತ್ ಪೂಜಾರಿ ಮನೆ ಬಳಿ ಕಾಲು ಸಂಕ ನಿರ್ಮಾಣ 5 ಲಕ್ಷ
18. ಇರಂದಾಡಿ ಅರಸರ ಮನೆ ಬಳಿ ಕಾಲು ಸಂಕ ನಿರ್ಮಾಣ 5 ಲಕ್ಷ
19. ಕಳತ್ತೂರು ಬಬ್ಬುಸ್ವಾಮಿ ದೈವಸ್ಥಾನ ಮನೆ ಬಳಿ ರಸ್ತೆ ಅಭಿವೃದ್ಧಿ 2 ಲಕ್ಷ
20. ಗೋಲಿಬೆಟ್ಟು ಕೊಡಮಂತ್ತಾಯ ರಸ್ತೆ ಅಭಿವೃದ್ಧಿ 5 ಲಕ್ಷ
21. SLRM ಘಟಕ ಉದ್ಘಾಟನೆ 7 ಲಕ್ಷ
22. ಜಿಲ್ಲಾ ಪಂಚಾಯತ್ ಅನುಧಾನ ನೀರಿನ ಟ್ಯಾಂಕ್ – 18 ಲಕ್ಷ

Leave a Reply

Your email address will not be published. Required fields are marked *