×
Our website is made possible by displaying online advertisements to our visitors. Please consider supporting us by whitelisting our website.
  • 9880645340

ತೆಂಕ ಎರ್ಮಾಳು ಗ್ರಾಮದ ಕಲ್ಯಾಣಿ ಪೆಟ್ರೋಲ್ ಪಂಪ್ ಬಳಿ ಇರುವ ಬಿಎಸ್‌‌ಎನ್ಎಲ್ ಟವರ್ ಜನರೇಟರಿಗೆ ಅಳವಡಿಸಿದ ಆಲ್ಟರ್‌‌ನೇಟರ್‌‌ ಕಳವು

ಪಡುಬಿದ್ರಿ: ಪಿರ್ಯಾದಿದಾರರಾದ ದಿನೇಶ್ ಡಿ ಸಾಲಿಯಾನ್ (38),  , ಎರ್ಮಾಳು ತೆಂಕ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಬೆಂಗಳೂರಿನ ಎಸ್.ಎಸ್. ಪವರ್ ಕಂಪನಿಯ ಉದ್ಯೋಗಿಯಾಗಿದ್ದು, ಕಂಪನಿಯವರು ವಹಿಸಿಕೊಂಡ ಬಿಎಸ್‌‌ಎನ್‌‌ಎಲ್ ಟವರ್ ಮೆಂಟೆನೆನ್ಸ್ ಮಾಡಿಕೊಂಡಿದ್ದು, ಪಿರ್ಯಾದಿದಾರರು ಹೆಜಮಾಡಿಯಿಂದ ಕಟಪಾಡಿವರೆಗಿನ ಒಟ್ಟು 13 ಸೈಟು‌ಗಳಿಗೆ ಅಳವಡಿಸಿದ ಜನರೇಟರ್‌ಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವುದಾಗಿದೆ. ಅದರಂತೆ ಪಿರ್ಯಾದಿದಾರರು ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಕಲ್ಯಾಣಿ ಪೆಟ್ರೋಲ್ ಪಂಪ್ ಬಳಿ ಇರುವ ಬಿಎಸ್‌‌ಎನ್ಎಲ್ ಟವರ್ ಜಾಗದಲ್ಲಿ ಅಳವಡಿಸಿದ ಜನರೇಟರ್ ಸುತ್ತಮುತ್ತ ದಿನಾಂಕ 04/10/2022 ರಂದು 15:00 ಗಂಟೆಯ ವೇಳೆಗೆ ಸ್ವಚ್ಛ ಮಾಡಿ ಬಂದಿದ್ದು, ನಂತರ ದಿನಾಂಕ 10/10/2022ರಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿ ಜನರೇಟರಿಗೆ ಅಳವಡಿಸಿದ ಆಲ್ಟರ್‌‌ನೇಟರ್‌‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಜನರೇಟರ್ ಆಲ್ಟರ್‌‌ನೇಟರ್‌ನ ಮೌಲ್ಯ ರೂಪಾಯಿ 40,000/- ಆಗಿರುವುದಾಗಿದೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *