×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಮಂಗಳೂರು ಸಂಸ್ಥಾಪನ ದಿನದ ಪ್ರಯುಕ್ತ ಡ್ರಾಗ್ಸ್ ಬಗ್ಗೆ ಮಾಹಿತಿ ಹಾಗೂ ಒರಿಯೆಂಟಲ್ ತರಗತಿ

ದಿನಾಂಕ 13ಅಕ್ಟೋಬರ್ 2022 ರಂದು ಸಂಸ್ಥಾಪನಾ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಡಿ ಕೆ ಎಸ್ ಸಿ. ಸ್ಥಾಪಕ ಅಧ್ಯಕ್ಷರಾದ ಬಹು ಹಸನುಲ್ ಫೈಝಿ ಅಜ್ಜಾವರ ದ್ವಜಾರೋಹಣ ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ ಉಪಾಧ್ಯಕ್ಷರಾದ ಹುಸೈನಾಜಿ ಕಿನ್ಯಾ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ ಇಹ್ಸಾನ್ ವ್ಯವಸ್ಥಾಪಕರಾದ ಯು. ಕೆ ಮುಸ್ತಫಾ ಸಆದಿ ನಡೆಸಿದರು. ಡಿ ಕೆ ಎಸ್ ಸಿ. ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜೆಮಾರ್ ಪ್ರಾಸ್ತವನೆಗೈದರು. ಅಖಿಲ ಕರ್ನಾಟಕ ಮಾದಕ ವ್ಯಸನ ನಿಯಂತ್ರಣಾ ಸಮಿತಿ ದ. ಕ ಹಾಗೂ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಅಡ್ವಕೇಟ್ ಇಸ್ಮಾಯಿಲ್ ರವರಿಂದ ಡ್ರಗ್ಸ್ ಬಗ್ಗೆ ಜನಜಾಗ್ರತಿ ಹಾಗೂ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಮಾಹಿತಿ ಹಾಗೂ ಜಾಗ್ರತಿಯನ್ನು ಮೂಡಿಸಿದರು. ಪ್ರೊಫೆಸರ್ ರಫೀಕ್ ಮಾಸ್ಟರ್ ಮಕ್ಕಳಿಗೆ ಸ್ಫೂರ್ತಿ ನೀಡುವ ಮೋಟಿವೇಷನ್ ತರಗತಿ ನೀಡಿದರು. ಇಹ್ಸಾನ್ ಎಜು ಪ್ಲಾನೆಟ್ ವಿದ್ಯಾರ್ಥಿ ಶಿಹಾಬುದ್ದೀನ್ ತಂಬಾಕು ಮಾರಕವಸ್ತು ಎಂಬ ಡಾಕ್ಯುಮೆಂಟರಿ ಮಾಡಿ ಜನರಿಗೆ ತೋರಿಸಿದರು. ಎಜು ಪ್ಲಾನೆಟ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಅಲ್ ಇಹ್ಸಾನ್ ಕ್ಯಾಂಪಸ್ ನಲ್ಲಿ ನಡೆಯಿತು. ಡಿ ಕೆ ಎಸ್ ಸಿ. ಯಲ್ಲಿ ಹಲವಾರು ವರ್ಷ ತೊಡಗಿಸಿಕೊಂಡು ಮರಣ ಹೊಂದಿದ ಕಾರ್ಯಕರ್ತರಿಗೆ ಹಾಗೂ ಹಾಲಿ ಕಾರ್ಯಾಚರಿಸುತ್ತಿರುವ ಕಾರ್ಯಕರ್ತರ ಕುಟುಂಬದಲ್ಲಿ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ, ರಾಷ್ಟ್ರೀಯ ಸಮಿತಿ, ವಲಯ ಸಮಿತಿ , ಘಟಕಗಳಿಂದ ಬಂದಂತಹಾ ಸದಸ್ಯರೂ, ಜಿಲ್ಲಾ ಸಮಿತಿ ಹಾಗೂ ಘಟಕ, ಮರ್ಕಝ್ ಸಮಿತಿ, ಗೈಡೆನ್ಸ್ ಬ್ಯುರೋ ಗಳಿಂದ ಬಂದಂತಹ ಸದಸ್ಯರುಗಳು ಬಾಗವಹಿಸಿದ್ದರು. ಸಮನ್ವಯ ಉಪಸಮಿತಿ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮರ್ಕಝ್ ಸಮಿತಿ ಪ್ರಧಾನ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ವಂದಿಸಿದರು.

Leave a Reply

Your email address will not be published. Required fields are marked *