
ಕೆಲ ತಿಂಗಳ ಹಿಂದೆ ಉಡುಪಿ ತಾಲೂಕಿನ ಹಿರಿಯಡ್ಕ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ 3 ಜನ ವಿದ್ಯಾರ್ಥಿಗಳು ಕಾಲೇಜಿನ ದೇವಾಲಯಕ್ಕೆ ತೆರಳಿ ಅನಂತರ ಪಕ್ಕದಲ್ಲಿಯೇ ಇರುವ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾರೆ. ವಿಷಯ ತಿಳಿದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಮೃತ ಪೆರ್ಡೂರ್ ಗ್ರಾಮದ ಸುದರ್ಶನ್, ಪೆರ್ಡೂರ್ ಗ್ರಾಮದ ಪಾಡಿಗಾರ ನಿವಾಸಿ ಕಿರಣ್ ಕುಮಾರ್ ಹಾಗೂ ಅಂಜಾರು ಗ್ರಾಮದ ಸೋನಿಶ್ ರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು..ಇದೀಗ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಮೃತರ ಕುಟುಂಬವು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ತನ್ನ ಬೆಂಗಳೂರು ಪ್ರವಾಸ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.. ಮಾನ್ಯ ಶಾಸಕರ ಮನವಿಯಂತೆ ಇದೀಗ ಮೃತ ಕುಟುಂಬಕ್ಕೆ ತಲಾ ಒಂದು ಲಕ್ಷದಂತೆ ಒಟ್ಟು 3 ಲಕ್ಷರೂಗಳನ್ನು ಬಿಡುಗಡೆಮಾಡಿ ಈಗಾಗಲೇ ಮೃತ ಕುಟುಂಬಕ್ಕೆ ರವಾನಿಸಲಾಗಿದೆಯೆಂದು ಕಾಪು ಶಾಸಕರ ಕಚೇರಿ ತನ್ನ ಕಚೇ ರಿ ಪ್ರಕಟಣೆಯಲ್ಲಿ ತಿಳಿಸಿದೆ.




