ಪರ್ಕಳ: ಜೆಸಿಐ ಪರ್ಕಳ ಘಟಕದ 2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಸನತ್ ಶೆಟ್ಟಿಗಾರ್ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಅಭಿಷೇಕ್ ಶಾಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಘಟಕದ ಮುಂದಿನ ಸಾಲಿನ ಆಡಳಿತ ಮಂಡಳಿ ರಚನೆಯ ಪ್ರಕ್ರಿಯೆಯಲ್ಲಿ ಉಭಯ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಘಟಕದ ಸದಸ್ಯರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ಜೆಸಿಐ ಪರ್ಕಳ ಘಟಕವು ಯುವಜನರ ನಾಯಕತ್ವ ವಿಕಸನ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಂಘಟನೆಯ ಬೆಳವಣಿಗೆಗೆ ಮತ್ತಷ್ಟು ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.
ನೂತನ ಪದಾಧಿಕಾರಿಗಳಿಗೆ ಘಟಕದ ಎಲ್ಲಾ ಸದಸ್ಯರು ಶುಭ ಹಾರೈಸಿದ್ದಾರೆ

