: ಅವಿಭಜಿತ ದ. ಕ.ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳ ತವರು ಭೂಮಿ ಇಲ್ಲಿಯ ಜನರಿಗೆ ಆರ್ಥಿಕ ರಂಗದಲ್ಲಿ ಬಹಳಷ್ಟು ಮುತುವರ್ಜಿ ಕಾಳಜಿ ಸಹಕಾರ ರಂಗದಲ್ಲಿ ನಡೆಯುವಷ್ಟು ಪ್ರಾಮಾಣಿಕ ಸೇವೆ, ಹಣಕ್ಕೆ ಭದ್ರತೆ ಎಲ್ಲಿಯೂ ಇಲ್ಲ ಎಂದು ಕೃಷ್ಣಾಪುರ ಶ್ರೀಪಾದರು ಹೇಳಿದರು.ಅ. 24ರಂದು ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯನ್ನು ಜೋಡು ಕಟ್ಟೆಯ ಆಶ್ರಯ ಟವರ್ಸ್‌ನ ಮೊದಲ ಮಹಡಿಯ ನೂತನ ಹವಾನಿಯಂತ್ರಿತ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಹಾಗೂ ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಶ್ರೀಪಾದರು ಆಶೀರ್ವಚನ ನೀಡಿದರು,

ಅಧ್ಯಕ್ಷತೆ ವಹಿಸಿದ್ದ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರೂ ಆದ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, “ಗ್ರಾಹಕರ ತೃಪ್ತಿ ಮತ್ತು ಗುಣಮಟ್ಟದ ಸೇವೆಯೇ ನಮ್ಮ ಮುಖ್ಯ ಗುರಿ. ಕಳೆದ 25 ವರ್ಷಗಳಿಂದ ನಿಮ್ಮ ಬೆಂಬಲದಿಂದ ಬೆಳೆದು ಬಂದಿರುವ ನಮ್ಮ ಸೊಸೈಟಿ, ಈಗ ಸ್ವಂತ ಕಟ್ಟಡ ಹೊಂದುವ ಮೂಲಕ ಮತ್ತಷ್ಟು ಆಧುನಿಕ ಹಾಗೂ ವೇಗದ ಸೇವೆಯನ್ನು ನೀಡಲು ಸಜ್ಜಾಗಿದೆ,” ಎಂದು ತಿಳಿಸಿದರು.

ದೀಪ ಪ್ರಜ್ವಲನೆ ಮಾಡಿದ ಹಿರಿಯ ಸಹಕಾರಿ ಟಿ. ಶಂಭು ಶೆಟ್ಟಿ ಸಲಹೆಗಾರ ಕೆ. ಕಮಲಾಕ್ಷ ಹಿರಿಯ ಸದಸ್ಯ ರಾಮಚಂದ್ರ ಸನಿಲ್ ಅವರನ್ನು ಕೆ. ರಘುಪತಿ ಭಟ್ ಸಮ್ಮಾನಿಸಿದರು. ಕೆಳಾರ್ಕಳ ಬೆಟ್ಟು ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕವಾಟು, ಪ್ರಜ್ಞಾಮತ್ತು ಪಾರ್ವತಿ ಅವರಿಗೆ ವೈದ್ಯಕೀಯ ನೆರವು

ದೇವಿಪ್ರಸಾದ್ ಶೆಟ್ಟಿ ಬೆಳಪು, ಪುರುಷೋತ್ತಮ ಶೆಟ್ಟಿ ಕುಮಾರ್ ಜೆ., ಉದ್ಯಮಿಗಳಾದ ಸಾಧು ಸಾಲ್ಯಾನ್ ಹರಿಯಪ್ಪ ಕೋಟ್ಯಾನ್,, ಸೊಸೈಟಿ ಉಪಾಧ್ಯಕ್ಷ ರಮೇಶ್ ಶೆಟ್ಟಿ ನಿರ್ದೇಶಕರಾದ ಶ್ರೀಶ ಹರೀಶ್ಚಂದ್ರ ಅಮೀನ್, ಸುಧೀರ್ ಕೊಡವೂರು, ರಮೇಶ್ ಶೆಟ್ಟಿ ಜಾರ್ಕಳ, ಸ್ನೇಹಪ್ರಭಾ ಕಮಲಾಕ್ಷ ರಾಧಿಕಾ ಕಾಮತ್, ಗಣೇಶ್ ಕುಮಾರ್, ಶಿವಪ್ರಸಾದ್ ಶೆಟ್ಟಿ ಅವಿನಾಶ್ ಬಿ.ಎಸ್. ಉಪಸ್ಥಿತರಿದ್ದರು.
ನಿರ್ದೇಶಕ ಸುರೇಶ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು. ತೇಜಶ್ ಜೆ. ಬಂಗೇರ ನಿರೂಪಿಸಿ, ಸೊಸೈಟಿಯ ಸಿಇಒ ರಂಜಿತಾ ಪ್ರವೀಣ್ ವಂದಿಸಿದರು

