×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದೇವಸ್ಥಾನಕ್ಕೆ ಹೋದ ದಲಿತರ ಮೇಲೆ ಹಲ್ಲೆ…. ಹಿಂದು ಮುಖಂಡರ ಬಾಯಿಗೀಗ ಬೀಗ : ಸುಂದರ ಮಾಸ್ತರ್

ಹಿಂದೂ…ನಾವೆಲ್ಲಾ ಹಿಂದು , ನಾವೆಲ್ಲಾ ಒಂದು , ನಾವೆಲ್ಲಾ ಬಂಧು ಎಂದು ಬೊಬ್ಬೆ ಹೊಡೆಯುವ ಹಿಂದೂ ನಾಯಕರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಗ್ರಾಮದ ಸಿಧ್ಧಲಿಂಗೇಶ್ವರ ದೇವರ ಪೂಜೆಗೆ ಹೋದ ದಲಿತರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿರುವಾಗ ಹಿಂದು ಹುಲಿಗಳೆಂದು ಘರ್ಜಿಸುವವರು ಈಗ ಇಲಿಗಳಾಗಿ ಬಿಲ ಸೇರಿದ್ದಾರಾ…..?
ಯಾಕೆ ಸಿಧ್ಧಲಿಂಗೇಶ್ವರ ಹಿಂದು ದೇವರಲ್ವಾ….? ಪೂಜೆ ಮಾಡಿಸಲು ಹೋದ ಚಾಮನಾಳ ಗ್ರಾಮದ ಮಾದಿಗರು ಹಿಂದಗಳಲ್ವಾ…..?
ಗಣೇಶ ಮೆರವಣಿಗೆ ಇಂತಹ ರಸ್ತೆಯಲ್ಲಿ ಸಾಗಬೇಕು ಎಂದಾಗ ಗಂಟಲು ಹರಿಯುವ ವರೆಗೆ ಬೊಬ್ಬೆ ಹಾಕಿ ಚಪ್ಪಲಿ ಹಾಕಿಕೊಂಡೆ ಗಣಪತಿ ಮೂರ್ತಿ ಹಿಡಿದು ರಾಧ್ಧಂತ ಎಬ್ಬಿಸಿದವರಿಗೆ…. ಪೂಜೆಗೆ ಬಂದರು ಎಂಬ ಕಾರಣಕ್ಕೆ
ಮಾದಿಗ ಸಮೂದಾಯದ ಹಿಂದುಗಳಿಗೆ ಮನಸೋಇಚ್ಛೆ ಕಲ್ಲು , ದೊಣ್ಣೆಗಳಿಂದ ಹೊಡೆದರಲ್ಲಾ….. 10 ಜನ ಮಾರಾಣಾಂತಿಕ ಹಲ್ಲೆಯಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಲ್ಲಾ…… ಈಗ ಎಲ್ಲಿ ಹೋಯ್ತು ನಿಮ್ಮ ಪೌರುಷ…… ಹಾಗಿದ್ರೆ ನಿಮ್ಮದು ಭೂಟಾಟಿಕೆಯ ಹಿಂದುತ್ವವೇ……? ಹಾಗಾದರೆ ಹಿಂದುಗಳೆಂದರೆ ಯಾರು ? ನಿಮ್ಮ ಪಕ್ಷದ ಸಧಸ್ಯರು , ಹಿಂದೂ ಸಂಘಟನೆಯ ಸಧಸ್ಯರು ಮಾತ್ರವೇ ಹಿಂದಗಳೇ……?
ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಪ್ರಶ್ನಿಸಿದ್ದಾರೆ.
ದಲಿತರ ಮೇಲೆ ಹಲ್ಲೆ ನಡೆಸಿದ ಹದಿನಾಲ್ಕುಕ್ಕೂ ಅಧಿಕ ಜನರನ್ನೂ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *