×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ : ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟ

ಕಾರ್ಕಳ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ಮೋರ್ಚಾಉಡುಪಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಚೆಸ್ ಪಂದ್ಯಕೂಟವು ಕಾರ್ಕಳ ಶ್ರೀಮೂಡು ಮಹಾ ಗಣಪಥಿ ಕಲಾಮಂದಿರ ಬಂಡಿ ಮಠದಲ್ಲಿ ಯಶಸ್ವಿಯಾಗಿ ನಡೆಯಿತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸಿ ನಂತರ ಮಾತನಾಡಿದ ಅವರು ಮೋದಿಯವರ ಆಡಳಿತದಲ್ಲಿ ಪ್ರತಿಯೊಂದು ರಂಗಕ್ಕೂ ಹಾಗೂ ಪ್ರತಿಯೊಂದು ಸಮುದಾಯಕ್ಕೂ ಸಮಾನ ಅವಕಾಶಗಳು ಸಿಗುತ್ತಿವೆ ಚೆಸ್ ಬರಿ ಆಟವಲ್ಲ; ಅದು ಏಕಾಗ್ರತೆ, ತಂತ್ರ ಮತ್ತು ಬುದ್ಧಿಶಕ್ತಿಯ ಸಂಕೇತ. ನಮ್ಮ ಪ್ರಧಾನಿ ಮೋದಿಯವರು ಕೂಡ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ದೃಢ ಹಾಗೂ ತಂತ್ರಗಾರಿಕೆಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕ್ರೀಡೆಯು ಯುವಜನತೆಯಲ್ಲಿ ಶಿಸ್ತು ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ ಭಾಗವಹಿಸಿರುವ ಎಲ್ಲಾ ಸ್ಪರ್ಧಿಗಳಿಗೂ ಶುಭವಾಗಲಿ.”ಎಂದು ತಿಳಿಸಿದರು

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನವೀನ್ ಕುತ್ಯಾರು ರವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್’ ತತ್ವಕ್ಕೆ ಬದ್ಧವಾಗಿ, ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಈ ಚೆಸ್ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟಿಸಿದೆ.

ಯುವಜನತೆಯ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತಿದೆ. ಚೆಸ್ ಆಟವು ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಈ ಪಂದ್ಯಾವಳಿಯಲ್ಲಿ ಗೆಲುವು ಮತ್ತು ಸೋಲಿಗಿಂತ ಭಾಗವಹಿಸುವಿಕೆ ಹಾಗೂ ಕ್ರೀಡಾಸ್ಪೂರ್ತಿಯೇ ಮುಖ್ಯ. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸಂಘಟಕರಿಗೆ, ತೀರ್ಪುಗಾರರಿಗೆ ಹಾಗೂ ಉತ್ಸಾಹದಿಂದ ಭಾಗವಹಿಸಿದ ಸ್ಪರ್ಧಿಗಳಿಗೆ ಧನ್ಯವಾದಗಳು.ತಿಳಿಸಿದರು

ಈ ಸಂದರ್ಭದಲ್ಲಿ ರುಡಲ್ಫ್ ಡಿಸೋಜ, ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷರು. ಶ್ರೀಕಾಂತ್ ನಾಯಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಜೆಸ್ಸೈಲ್ ಡಿಸೋಜಾ ಉಡುಪಿ ಜಿಲ್ಲಾ ಪ್ರಭಾರಿ ರಾಜ್ಯ ಕಾರ್ಯದರ್ಶಿ ಬೋಳ ಹಾರಿಸ್ ಪೂಜಾರಿ ಮಂಡಲ ಪ್ರಧಾನ ಕಾರ್ಯದರ್ಶಿ
ಶೇಕ್ ಆಸಿಫ್ ಅಲ್ಪಸಂಖ್ಯಾತ ಮೋರ್ಚಾ ಮೊಹಮ್ಮದ್ ಅಫ್ಸರ್ ಪ್ರಧಾನ ಕಾರ್ಯದರ್ಶಿ ಮಹಾವೀರ ಗಡೆ ಮಾಜಿ ಅಧ್ಯಕ್ಷರು ಕಾರ್ಕಳ ಮಂಡಲ
ಪ್ರಕಾಶ್ ಡಿಸೋಜ ಅಲ್ಪಸಂಖ್ಯಾತ ಮೋರ್ಚಾ ಕಾರ್ಕಳ ಅಧ್ಯಕ್ಷರು ಆಂತೋನಿ ಡಿಸೋಜ ಸಲೀಂ ಅಂಬಾಗಿಲು ಚಿರಂಜೀವಿ
ಜರಾಲ್ಡ್ ಡಿಸೋಜಾ ಇಜಾಜ್ ಷರೀಫ್ ಜ್ಯೋತಿ ಹರೀಶ್ ಬಾಸಿಲ್ ಡಿಸೋಜಾ ಶಮಲ ಕುಂದರ್ ರಾಷ್ಟ್ರೀಯ ಮಹಿಳಾ ಆಯೋಗ ಮಾಜಿ ಸದಸ್ಯೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *