×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೆಂಗಳೂರು : ಸಾಮಾಜಿಕ, ಸೇವೆಗೆ ಕೆ. ಪಿ ಇಬ್ರಾಹಿಂ ರವರಿಗೆ ‘ಸಾಮಾಜಿಕ ಸೇವಾ ರತ್ನ’ ರಾಜ್ಯ ಪ್ರಶಸ್ತಿ

ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಕೆ. ಪಿ. ಇಬ್ರಾಹಿಂ ಅವರಿಗೆ ‘ಸಾಮಾಜಿಕ ಸೇವಾ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರುನ ನೆಲಮಂಗಲದ ಪುಷ್ಕ ಬೈರೇಗೌಡ ಕನ್ನೆನ್‌ನ್ ಹಾಲ್‌ನಲ್ಲಿ ಶನಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ 4ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ಸುಪ್ರೀಂ ಕೋಟ್ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು ಕೆ. ಪಿ ಇಬ್ರಾಹಿಂ ರವರಿಗೆ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ಜನಪರ ಕಾಳಜಿಯೊಂದಿಗೆ ವಿವಿಧ ಹೋರಾಟಗಳು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಅಲ್ಲಿದೆ ರಾಜಕೀಯ ರಂಗದಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸಿಯುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹೇಳದರು

ಸಮಾಜಮುಖ ಕಾರ್ಯಗಳ ಮೂಲಕ ಜನರ ಸಮಸ್ಯೆಗಳಗೆ ಸ್ಪಂದಿಸುತ್ತಿರುವ ಕೆ. ಪಿ ಇಬ್ರಾಹಿಂ ರವರಿಗೆ ರಾಜ್ಯ ಮಟ್ಟದ ಗೌರವ ದೊರೆತಿರುವುದು ಅವರ ಅಭಿಮಾನಿಗಳು ಹಾಗೂ ಹಿತೈಷಗಳಲ್ಲಿ ಸಂತಸ ಮೂಡಿಸಿದೆ

ಈ ಸಂದರ್ಭದಲ್ಲಿ ಚಲವಾದಿ ನಾರಾಯಣಸ್ವಾಮಿ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಎಸ್ ಪಿ ದಯಾನಂದ್
ಬಿಕೆ ರವಿ ಬೆಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರವೀಣ್ ಶೆಟ್ಟಿ ಕರವೇ ರಾಜ್ಯಾಧ್ಯಕ್ಷರು ಜಗದೀಶ್ ಜೈ ಕರ್ನಾಟಕ ರಾಜ್ಯಾಧ್ಯಕ್ಷರು
ಜಗಲೂರು ಲಕ್ಷ್ಮಣರಾವ್ ಗೋವಿಂದ ಬಾಬು ಪೂಜಾರಿ ವಿವಿರೆಯದಿಂದ ಪತ್ರಕರ್ತರು ಭಾಗವಹಿಸದ್ದದು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *