ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22ನೇ ವರ್ಷದ ಚಾತುರ್ಮಾಸ್ಯ ವ್ರತವು 2026ರ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಪಡುಕುತ್ಯಾರಿನ ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆಯಲಿದೆ.
🕉️ ನಾಳೆ (ಜುಲೈ 29) ವ್ರತಾರಂಭದ ಪ್ರಮುಖ ಕಾರ್ಯಕ್ರಮಗಳು:
🔸 ಬೆಳಿಗ್ಗೆ 6.00 ಗಂಟೆಗೆ – ಶ್ರೀಕರಾರ್ಚಿತ ದೇವತಾ ಪೂಜೆ ಹಾಗೂ ಶ್ರೀ ವಿಶ್ವಕರ್ಮ ಯಜ್ಞ
🔸 ಬೆಳಿಗ್ಗೆ 9.00 ಗಂಟೆಗೆ – ಚಾತುರ್ಮಾಸ್ಯ ವ್ರತ ಸಂಕಲ್ಪ ಮತ್ತು ಶ್ರೀ ಗುರುಪಾದುಕಾ ಪೂಜೆ ಆರಂಭ
🔸 ಮಧ್ಯಾಹ್ನ 12.00 ಗಂಟೆಗೆ – ಧಾರ್ಮಿಕ ಸಭೆ
🌸 ಚಾತುರ್ಮಾಸ್ಯದ ಪ್ರತಿದಿನದ ಸೇವೆಗಳು:
✨ ಬೆಳಿಗ್ಗೆ 8.00 ಹಾಗೂ ಸಂಜೆ 5.30ಕ್ಕೆ – ದುರ್ಗಾ ನಮಸ್ಕಾರ ಪೂಜೆ
✨ ಬೆಳಿಗ್ಗೆ 9.00 ರಿಂದ 10.00ರವರೆಗೆ – ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ
✨ ಗುರುಪಾದುಕಾ ಪೂಜೆಯ ನಂತರ – ಉಪನ್ಯಾಸ ಮಾಲಿಕೆ
✨ ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ – ವಿವಿಧ ದೇವಸ್ಥಾನಗಳು ಮತ್ತು ಸಂಘ-ಸಂಸ್ಥೆಗಳ ವತಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳು
🌼 ವಿಶೇಷ ಕಾರ್ಯಕ್ರಮಗಳು:
🌺 ಆಗಸ್ಟ್ 9 – ಶ್ರೀಗುರುಗಳ ಸುವರ್ಣ ಜನ್ಮವರ್ಧಂತಿ ಮಹೋತ್ಸವ ಆರಂಭ
🌺 ಆಗಸ್ಟ್ 23 – ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ
🌺 ಸೆಪ್ಟೆಂಬರ್ 20 – ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ ಹಾಗೂ ವಿಶೇಷ ವೈದಿಕ ಕಾರ್ಯಕ್ರಮ
🌺 ಸೆಪ್ಟೆಂಬರ್ 26 – ಸೀಮೋಲ್ಲಂಘನ, ಧಾರ್ಮಿಕ ಸಭೆ ಹಾಗೂ ಚಾತುರ್ಮಾಸ್ಯ ಸಮಾರೋಪ
🙏 ಈ ಪವಿತ್ರ ಚಾತುರ್ಮಾಸ್ಯ ಪರ್ವಕಾಲದಲ್ಲಿ ತಾವು ಸಕುಟುಂಬ ಸಮೇತರಾಗಿ, ಬಂಧು-ಮಿತ್ರರೊಂದಿಗೆ ಆಗಮಿಸಿ ಶ್ರೀ ಗುರುಪಾದುಕಾ ಪೂಜೆಯಲ್ಲಿ ಭಾಗವಹಿಸಿ, ಶ್ರೀ ಜಗದ್ಗುರುಗಳ ದಿವ್ಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆತ್ಮೀಯ ಆಹ್ವಾನ.

