×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಿನಾರಾ ಗ್ಲೋಬಲ್ ಶಾಲೆಯಲ್ಲಿ ಶಾಲಾ ಸಂಸತ್ ಪದಪ್ರದಾನ ಸಮಾರಂಭ ಹಾಗೂ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ

ಕಿನಾರಾ ಗ್ಲೋಬಲ್ ಶಾಲೆ, ಎರ್ಮಾಳು ತೆಂಕದಲ್ಲಿ ಶಾಲಾ ಸಂಸತ್ ಪದಾಪ್ರದಾನ ಸಮಾರಂಭ (Investiture Ceremony) ಹಾಗೂ ಮಾದಕ ವಸ್ತು ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಕಾಪು ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ. ಜಿ . ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳ ಮಹತ್ವ, ಶಿಸ್ತು ಹಾಗೂ ಜವಾಬ್ದಾರಿಯುತ ವರ್ತನೆ ಬಗ್ಗೆ ತಿಳಿಸಿದರು. ಜೊತೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ), ಮುಂಬೈ ಅಧ್ಯಕ್ಷರಾದ ಸುರೇಶ್ ಕುಂದರ್, ಎರ್ಮಾಳು ತೆಂಕ ಅಧ್ಯಕ್ಷರಾದ ಕಿಶೋರ್ ಕುಮಾರ್, ಎರ್ಮಾಳು ತೆಂಕ ಮೊಗವೀರ ಸಭಾ (ರಿ) ಅಧ್ಯಕ್ಷರಾದ ಲಿಂಗಪ್ಪ ಪುತ್ರನ್ ಕಿನಾರಾ ಶಾಲಾ ಕಟ್ಟಡ ನಿಧಿ ಸಂಗ್ರಹ ಸಮಿತಿ ಅಧ್ಯಕ್ಷರಾದ ದಾಮೋದರ ಸುವರ್ಣ, ಹಾಗೂ ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಪ್ರಭಾಕರ್ ಪುತ್ರನ್ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಿಟಿಎ ಪ್ರತಿನಿಧಿ ಶ್ರೀಮತಿ ತುಳಸಿ ಉದಯ್ ಕರ್ಕೇರ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರೀತಿ ಸುವರ್ಣ ಅವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಶಿಕ್ಷಕಿ ಕುಮಾರಿ ವಿಕೆತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶುಶಾಂಕಾ ಸ್ವಾಗತಿಸಿದರು. ಶ್ರೀಮತಿ ನಮ್ರತಾ ವಂದನಾರ್ಪಣೆ ಸಲ್ಲಿಸಿದರು

Leave a Reply

Your email address will not be published. Required fields are marked *