‘ಆರೋಗ್ಯದ ಕ್ರಾಂತಿ – ಪರಿಶುದ್ಧ ಮರದ ಗಾಣದ ಅಡುಗೆ ಎಣ್ಣೆಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವ ಮೂಲಕ ಜನಮೆಚ್ಚುಗೆ ಗಳಿಸಿರುವ ‘ನಿಸರ್ಗ ಫ್ರೆಶ್’ ಕೋಲ್ಡ್ ಪ್ರೆಸ್ಡ್ ಆಯಿಲ್ ಆ್ಯಂಡ್ ಸ್ಟೈಸಸ್ ಸಂಸ್ಥೆಯ ನೂತನ 4ನೇ ಮಳಿಗೆಯು ಕಾಪು ದಂಡತೀರ್ಥ ಶಾಲೆಯ ಬಳಿಯ ಪ್ರೆಸ್ಟೀಜ್ ಬಿಲ್ಡಿಂಗ್‌ನಲ್ಲಿ ಜು. 12ರಂದು ಶುಭಾರಂಭಗೊಂಡಿತು.
ಕಾಪು ಶ್ರೀ ಹಳೇ ಮಾರಿಗುಡಿ ದೇಗುಲದ ಮಾಜಿ ಆಡಳಿತ ಟ್ರಸ್ಟಿ ಕೆ. ಶ್ರೀಧರ ಶೆಣೈ ಅವರು ಉದ್ಘಾಟಿಸಿ, ಗಾಣದ ಎಣ್ಣೆಯಿಂದ ತಯಾರಿಸಿದ ರುಚಿಕರ ಅಡುಗೆ, ಎಣ್ಣೆ ಉತ್ತಮ ಗುಣಮಟ್ಟ ಮತ್ತು ಆರೋಗ್ಯದಾಯಕ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಯನ್ನು ‘ಗಳಿಸಿದ ನಿಸರ್ಗ ಫ್ರೆಶ್’ ಸಂಸ್ಥೆಯು ಕಾಪು ಪರಿಸರದಲ್ಲಿಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ಸೂರಿ ಶೆಟ್ಟಿ ಕಾಪು, ಕಾಪು ಪುರಸಭೆ ಮಾಜಿ ಅಧ್ಯಕ್ಷರಾದ అనిలా ಕುಮಾರ್, ಉದ್ಯಮಿಗಳಾದ ರಘುನಾಥ್ ಮಾಬಿಯಾನ್, ರಾಮಚಂದ್ರ ಮಾಬಿಯಾನ್, ಯೋಗೀಶ್ ಸುವರ್ಣ ಶುಭ ಹಾರೈಸಿದರು.
ನೂತನ ಮಳಿಗೆಯಲ್ಲಿ ಮರದ ಗಾಣದಲ್ಲಿ ತಯಾರಿಸಲ್ಪಡುವ ತೆಂಗಿನಕಾಯಿ ಗಾಣದ ಎಣ್ಣೆ ಶೇಂಗಾ ಗಾಣದ ಎಣ್ಣೆ ಎಳ್ಳೆಣ್ಣೆ ಕುಸುಬಿ, ಅಗಸೆ ಬೀಜ, ಹುಚ್ಚೆಳ್ಳು ಸಾಸಿವೆ ಗಾಣದ ಎಣ್ಣೆ ಸಹಿತ ವಿವಿಧ ಬಗೆಯ ಎಣ್ಣೆಗಳು ಸಂಬಾರ ಪದಾರ್ಥಗಳ ಸಹಿತ ಅಡುಗೆಗೆ ಬಳಸುವ 30ಕ್ಕೂ ಅಧಿಕ ಉತ್ಪನ್ನಗಳು ಇಲ್ಲಿ ಲಭ್ಯ ಎಂದು ಮಾಲಕ ಪುನೀತ್ ಪೂಜಾರಿ, ದೀಪಾ ಪುನೀತ್ ದಂಪತಿ ತಿಳಿಸಿದರು.

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾ ಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಉದ್ಯಮಿ ಶ್ರೀಧರ ಶೇಣವ ಕಾಪು, ವನಜಾ ಬೊಲ್ಲು ಪೂಜಾರ್ತಿ, ಮಹೇಶ್ ಅಮೀನ್, ಮಹಮ್ಮದ್ ಶಕೀಲ್, ಉಮೇಶ್ ಕುಂದರ್, ರಾಕೇಶ್ ಪೂಜಾರಿ, ದಿನೇಶ್ ಕುಲಾಲ್, ನಾರಾಯಣ ಪೂಜಾರಿ ತೌಡಬೆಟ್ಟು, ರಮೇಶ್ ಕುಂದರ್ ಉಪಸ್ಥಿತರಿದ್ದರು.
ಅಶ್ವತ್ ಪೂಜಾರಿ ಕಟಪಾಡಿ ಸ್ವಾಗತಿಸಿ, ನಿರೂಪಿಸಿದರು

