×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಂಡತೀರ್ಥ: ಸಮವಸ್ತ್ರ ವಿತರಣೆ

ಕಾಪು ದಂಡತೀರ್ಥ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ವತಿಯಿಂದ ಸಮವಸ್ತ್ರ ವಿತರಣೆಯು ದಿನಾಂಕ 10.07.2026 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾ ll ಕೆ ಪ್ರಶಾಂತ್ ಶೆಟ್ಟಿ ಅವರು ನಾವು ದಾನಿಗಳ ನೆರವಿನೊಂದಿಗೆ ಎಲ್ಲಾ ಸವಲತ್ತುಗಳನ್ನು ಕನ್ನಡ ಮಾಧ್ಯಮದ ಮಕ್ಕಳಿಗೆ ನೀಡುತ್ತಿದ್ದೇವೆ.ಹಾಗೂ ಮಕ್ಕಳ ಪ್ರಗತಿಗೆ ಎಲ್ಲಾ ವ್ಯವಸ್ಥೆಗಳನ್ನು ಉಚಿತವಾಗಿ ನಿರ್ವಹಿಸುತ್ತಿದ್ದು ,ಕಲಿಕೆಗಾಗಿ ವೈಯಕ್ತಿಕವಾಗಿ ಗಮನಹರಿಸುತ್ತಿದ್ದೇವೆ.ಹೆತ್ತವರು ಕೂಡ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ಹಾಲು ಉತ್ಪಾದಕ ಮಹಾ ಮಂಡಳಿಯ ಮಾಜಿ ಸದಸ್ಯರಾದ ಕಾಪು ದಿವಾಕರ ಶೆಟ್ಟಿಯವರು ಸಂಸ್ಥೆಯ ವತಿಯಿಂದ ಸಮವಸ್ತ್ರ ವಿತರಿಸುತ್ತಿದ್ದು, ಪ್ರಸ್ತುತ ಸಮಯದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವುದು ಕಷ್ಟಕರವಾಗಿದ್ದು,ಅಂತಹ ಸಮಯದಲ್ಲಿ ಈ ಮಕ್ಕಳಿಗೆ ಸರಕಾರಿ ಶಾಲೆಗಳಂತೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ,ಅದಕ್ಕಾಗಿ ನಾವೆಲ್ಲ ಸೇರಿ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದೇವೆ.ಹೆತ್ತವರೇ ಇಲ್ಲಿ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.ನೀವೆಲ್ಲ ಮಕ್ಕಳು ಕಲಿಯಲು ಪ್ರೇರೇಪಣೆ ನೀಡಿ ಎಂದರು.
ಸಮಾರಂಭದಲ್ಲಿ ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಐತಪ್ಪ ಕೋಟ್ಯಾನ್,ಕಾರ್ಯದರ್ಶಿ ಅಮೀರುದ್ದೀನ್,ಮಾಜಿ ಕಾರ್ಯದರ್ಶಿ ರಘು ಪೂಜಾರಿ,ನಿರ್ದೇಶಕರಾದ ಪುರಂದರ,ಸಂಜೀವ ಶೇರಿಗಾರ್, ಪ್ರಾಂಶುಪಾಲ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಹೆತ್ತವರು,ಮಕ್ಕಳು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮದ ಮುಖ್ಯಸ್ಥೆ ಕೃಪಾ ಅಮ್ಮನ್ನ ಸ್ವಾಗತಿಸಿದರು, ಶಿಕ್ಷಕಿ ಸೌಮ್ಯ ವಂದಿಸಿದರೆ,ಅನಿತಾ ನಿರೂಪಿಸಿದರು.

Leave a Reply

Your email address will not be published. Required fields are marked *