ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷಸ್ಥಾನವನ್ನು ವಹಿಸಿದ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ರವರು ದೀಪ ಬೆಳಗಿಸಿ ಮಾತನಾಡಿ,ಯೋಗದಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು,ಹಾಗೂ ಯೋಗದಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬಹುದು. ಆದರೆ ಇದು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯಮುಂದುವರಿಯಬೇಕು ಎಂದರು.
ಯೋಗ ಶಿಕ್ಷಕಿ ವಿದಿಶಾ ಜಿ ರಾವ್ ಮಕ್ಕಳಿಗೆ ಯೋಗದ ಮಹತ್ವವನ್ನು ತಿಳಿಸಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸಂಸ್ಥೆಯ ಮುಖ್ಯಸ್ಥರಾದ ಶಿವಣ್ಣ ಬಾಯರ್,ಪ್ರಭಾಕರ್ ಶೆಟ್ಟಿ, ಸೂರಥ್ ಕುಮಾರ್, ವೀಣಾನಾಯಕ್,ವಾಣಿ,ತೇಜಶ್ರೀ,ಹೇಮಲತಾ, ಸಂಗೀತ ,ಶ್ವೇತಾ ,ಮಮತಾ ಕಲ್ಯಾ, ಉದಯ ಕುಮಾರ್,ಸೋಮನಾಥ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು

