×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶ್ರೀ ಸರಸ್ವತೀ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ. ಪಡುಕುತ್ಯಾರು ಅಧ್ಯಕ್ಷರಾಗಿ ಬಿ ಸೂರ್ಯಕುಮಾರ್ ಆಯ್ಕೆ

ಪಡುಕುತ್ಯಾರು: ಶ್ರೀ ಸರಸ್ವತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ. ಪಡುಕುತ್ಯಾರು ಇದರ ಮೊದಲ ಅಧ್ಯಕ್ಷರಾಗಿ ಬಿ. ಸೂರ್ಯಕುಮಾರ್ ಹಳೆಯಂಗಡಿ ಹಾಗೂ ಉಪಾಧ್ಯಕ್ಷರಾಗಿ ಡಾ. ಎಸ್ ಆರ್ ಹರೀಶ್ ಆಚಾರ್ಯ ಮಂಗಳೂರು ಇವರು ಚುನಾಯಿತರಾಗಿರುತ್ತಾರೆ. ಶ್ರೀಮದ್ ಜಗದ್ಗುರು
ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆಯು ನಡೆಯಿತು. ನೂತನ ನಿರ್ದೇಶಕರರಾಗಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಪ್ರಕಾಶ್ ಆಚಾರ್ಯ ಕುಂಟಾಡಿ , ಎಂ ಪಿ ಮೋಹನ ಆಚಾರ್ಯ ಉಡುಪಿ, ಕೃಷ್ಣ ಎನ್ ಆಚಾರ್ಯ ಉದ್ಯಾವರ, ನಾಗರಾಜ ಆಚಾರ್ಯ ಕಿನ್ನಿಗೋಳಿ, ಭರತ್ ಆರ್ ಆಚಾರ್ಯ, ಬಿ .ಕೆ ಹರ್ಷರಾಜ್ ಆಚಾರ್ಯ ಎಲ್ಲೂರು, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಬಾಳಿಲ ಆಯ್ಕೆಯಾಗಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ವಿ ಶ್ರೀಧರ ಆಚಾರ್ಯ ಒಡೆಯರ ಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಇವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಪ್ರಕ್ರಿಯೆ ನಡೆಯಿತು

Leave a Reply

Your email address will not be published. Required fields are marked *