×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ & ರಿಲಿಜಿಯಸ್ ಟ್ರಸ್ಟ್ ನ ಕುಟುಂಬದ 99 ಜನ ಸದಸ್ಯರಿಂದ ಕಾಪುವಿನ ಅಮ್ಮನಲ್ಲಿ ಪ್ರಾರ್ಥನೆ

ಕೊರಂಗ್ರಪಾಡಿ ದೊಡ್ಡಮನೆ ಮನೆತನದಿಂದ 99 ಜನ ಸದಸ್ಯರು 99 ಚೆಂಡು ಮಲ್ಲಿಗೆ ಮತ್ತು 99 ಹೂವಿನ ಪೂಜೆ ಸಲ್ಲಿಸುವ ಮುಖೇನ ಕಾಪುವಿನ ಅಮ್ಮನ ಅಭಯ ವಾಕ್ಯವನ್ನು ಪಡೆದರು.

ಏಪ್ರಿಲ್ 29ರಂದು ನಡೆಯುವ ಅಶ್ವತ ಸ್ವಯಂವರ ಸಹಿತಾದಿ ನಾಗದೇವರ ಪೂಜೆ ಮತ್ತು ಏಪ್ರಿಲ್ 30 ರಂದು ನಡೆಯುವ ದೈವದ ನೇಮೋತ್ಸವವು ನಿರ್ವಿಘ್ನವಾಗಿ ವಿಜೃಂಭಣೆಯಿಂದ ನೆರವೇರಿ ಕುಟುಂಬಕ್ಕೆ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ & ರಿಲಿಜಿಯಸ್ ಟ್ರಸ್ಟ್ ನ ಅಧ್ಯಕ್ಷ ಮತ್ತು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ದೇವಳದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಮಾಧವ ಆರ್. ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಜಯರಾಮ್ ಆಚಾರ್ಯ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಸಾಯಿನಾಥ್ ಹೆಗ್ಡೆ, ಟ್ರಸ್ಟಿಗಳಾದ ಲತಾ ಸುಧೀರ್ ಶೆಟ್ಟಿ, ಉಷಾ ಮನೋಹರ್ ಶೆಟ್ಟಿ, ಅತುಲ್ ರಾಜ್ ಹೆಗ್ಡೆ, ಉಮನಾಥ್ ಶೆಟ್ಟಿ, ವಿಜಯ ಎಲ್. ಶೆಟ್ಟಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *