ಕಾಪು ಕಾಪು ಬಿಲ್ಲವರ ಸಭವನ ಮತ್ತು ಶ್ರೀ ನಾರಾಯಣ ಗುರುಸಭಾಂಗಣವನ್ನು ಶನಿವಾರ ಸಂಜೆ ಉದ್ಘಾಟನೆಗೊಳಿಸಲಾಯಿತುಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ,. ನಮ್ಮಗುರು ಪರಂಪರೆ ಶಾಶ್ವತವಾದ ಒಂದು ಶಕ್ತಿ ಅದನ್ನು ಬಿಟ್ಟು ಹೋಗಬೇಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ, ಮಾರ್ಗದರ್ಶನ ಅರಿತುಕೊಂಡು ಸಮಾಜ, ಸಂಘಟನೆ ಸದೃಢಗೊಳ್ಳಲು ಸಾಧ್ಯ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಬೋಧಿಸಿದ ತತ್ವಾದರ್ಶ ಗಳು, ಸಂದೇಶಗಳನ್ನು ಅನುಸರಿಸಿ ಸಮಾಜ ಕಟ್ಟಬೇಕಿದೆ ಎಂದರು. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಸಭಾಂಗಣವನ್ನು ಉದ್ಘಾಟಿಸಿದ ಮೊಗವೀರ ಮುಂದಾಳು ಡಾನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಬಿಲ್ಲವರು, ಮೊಗವೀರರ ಸಹಿತ ಸಮಸ ಹಿಂದುಳಿದ ವರ್ಗಗಳನ್ನು ಸೇರಿಸಿ ಸಮಾಜ ಕಟ್ಟುವ ಯೋಜನೆ ಇದೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ವೇದಿಕೆಯನ್ನು ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿದರು.
ಕರಾವಳಿ ಅಭಿವೃದ್ಧಿಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಲಾಲಾಜಿ ಮೆಂಡನ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೆಬ್ರಿ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಳದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಶ್ರೀ ಲಕ್ಷ್ಮೀ ಜನಾರ್ದನ ದೇಗುಲ ಆಡಳಿತ ಮೊತ್ತೇಸರ ಮನೋಹರ್ ಎಸ್. ಶೆಟ್ಟಿ ಶ್ರೀ ಹಳೇ ಮಾರಿಗುಡಿ ದೇಗುಲ ಆಡಳಿತ ಮೊತ್ತೇಸರ ಪ್ರಸಾದ್ ಶೆಣೈ, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶಿವಾನಂದ್
ಸರಿತಾ ಅತಿಥಿಗಳಾಗಿದ್ದರು. ಸಂಘದ ಗುರುಮಂದಿರದ ಪ್ರಧಾನ ಆರ್ಚಕ ಚರಣ್ ಶಾಂತಿ, ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಅಧ್ಯಕ್ಷ ಮಾಧವ ಪಾಲ ಪಾಲನ್, ಗೌ. ಪ್ರ. ಕಾರ್ಯದರ್ಶಿ ವಿಠಲ ಸಾಲ್ಯಾನ್, ಉಪಾಧ್ಯಕ್ಷರಾದ ಐತಪ್ಪ ಕೋಟ್ಯಾನ್, ಸಖೇಂದ್ರ ಸುವರ್ಣ, ಮಧು ಪಾಲನ್, ಕೋಶಾಧಿಕಾರಿ ಉದಯ ಸನಿಲ್, ಮಹಿಳಾ ಮಂಡಳಿ ಸಂಚಾಲಕಿ ಸರಿತಾ ಸಾಲ್ಯಾನ್, ಪ್ರತಿನಿಧಿ ಪ್ರೇಮಾ ರಾಘು ಉಪಸ್ಥಿತರಿದ್ದರು.
ಬಿಲ್ಲವರ ಭವನದ ವಾಸ್ತು ವಿನ್ಯಾಸಗಾರ ತ್ರಿವಿಕ್ರಮ್ ಭಟ್, ನಿರ್ಮಾಣ ಕಾಮಗಾರಿಯ ಉಸ್ತುವಾರಿ ಶಶಿಧರ ಸುವರ್ಣ ಹಾಗೂ ದಾನಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅದ್ ಅಧ್ಯಕ್ಷರನ್ನು ಸನ್ಮಾನಿಸಲಾಯಿತು

ಕಾರ್ಯದರ್ಶಿ ಅನಿಲ್ ಕುಮಾರ್ ವರದಿ ಮಂಡಿಸಿದರು. . ಸಚ್ಚೇಂದ್ರ ಅಂಬಾಗಿಲು ನಿರೂಪಿಸಿದರು. ಸುನೀಲ್ ಪೂಜಾರಿ ದಾನಿಗಳ ಪಟ್ಟಿ ವಾಚಿಸಿದರು

