ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಕಂಚಿನಡ್ಕ-ಪಡುಬಿದ್ರಿ ಯಲ್ಲಿ ನಡೆಸಲಾಯಿತು. ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ರವರು ಧ್ವಜಾರೋಹಣ ಮಾಡಿದರು ಈ ಸಂದರ್ಭ ಮಾತನಾಡಿ ಕನ್ನಡ ಭಾಷೆ ಈಗ ಅವನತಿಯತ್ತ ಸಾಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸುಜಿತ್ ಪಡುಬಿದ್ರಿ ಕ.ರ.ವೇ ಯುವಸೇನೆ ಕಾಪು ತಾಲೂಕು ಅಧ್ಯಕ್ಷರು, ಅಬೂಬಕ್ಕರ್ ಮಂಚಕಲ್ ಕ.ರ.ವೇ ಯುವಸೇನೆ ಉಪಾಧ್ಯಕ್ಷರು, ಕೆ ಐ ಸಿದ್ದೀಕ್ ಕಾಪು ಕಾರ್ಯದರ್ಶಿ ಕ.ರ.ವೇ, ಜುಬೇರ್ ಕಾಪು ತಾಲೂಕು ಸಂಚಾಲಕ ಕ.ರ.ವೇ, ಪಂಚಾಯತ್ ಸದಸ್ಯರಾದ ಎಮ್.ಎಸ್ ಶಾಫಿ, ಫಿರೋಜ್ ಕಂಚಿನಡ್ಕ,ಎಮ್.ಎಸ್ ಮನ್ಸೂರ್ ಉದ್ಯಮಿ, ಯೋಗಿಶ್ ಪಾಡಬೆಟ್ಟು,ಆಟೋ ಚಾಲಕರಾದ ಅಶ್ರಫ್ ಕಂಚಿನಡ್ಕ, ಅಬ್ದುಲ್ ರಜಾಕ್ ಪಡುಬಿದ್ರಿ, ಅನ್ವರ್ ಬೆಂಗರೆ, ನಿಜಾಮ್ ಉಚ್ಚಿಲ, ಮೊಹಮ್ಮದ್ ರಿಫಾನ್ ಕಂಚಿನಡ್ಕ,ಇಸ್ಮಾಯಿಲ್ ಸಾಹಿಬ್ ಕಂಚಿನಡ್ಕ, ಹಾಗೂ ಊರಿನ ದೇಶ ಪ್ರೇಮಿ ನಾಗರಿಕರು ಉಪಸ್ಥಿತರಿದ್ದರು.


