×
Our website is made possible by displaying online advertisements to our visitors. Please consider supporting us by whitelisting our website.
  • 9880645340

ದಂಡತೀರ್ಥ:ಜಾಗೃತಿ ಕಾರ್ಯಕ್ರಮ

ಕರ್ನಾಟಕ ಲೋಕಾಯುಕ್ತ,ಉಡುಪಿ ಜಿಲ್ಲೆ ಇದರ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಕಾಪು ದಂಡತೀರ್ಥ ಪಿ. ಯು. ಕಾಲೇಜಿನಲ್ಲಿ ದಿನಾಂಕ 29.10.2025 ರಂದು ಮಾಹಿತಿ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಲೋಕಾಯುಕ್ತ ವಿಭಾಗದ ಡಿವೈಎಸ್ಪಿ ಮಂಜುನಾಥ್ ಇವರು ಮಾತನಾಡಿ,ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಇಲಾಖೆಗಳಲ್ಲಿ ಭ್ರಷ್ಟಾಚಾರವು ತುಂಬಿಕೊಂಡಿದ್ದು ಜನರ ಬದುಕು ದುಸ್ತರವಾಗಿದೆ.ಹಾಗೂ ಡ್ರಗ್ಸ್ ನಂತಹ ಮಾದಕ ವ್ಯಸನಗಳು ವಿದ್ಯಾರ್ಥಿಗಳನ್ನು ಬಲಿತೆಗೆದುಕೊಳ್ಳುತ್ತಿದೆ.ಅಲ್ಲದೆ ಸೈಬರ್ ಅಪರಾಧವು ಭಯಾನಕವಾಗಿ ಹಬ್ಬಿದ್ದು ಜನರ ಬದುಕು ನರಕ ಸದೃಶವಾಗಿದೆ.ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಜಾಗೃತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿಬರಬೇಕು ಎಂದು ತಿಳಿಸಿ ,ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.
ಇನ್ನೋರ್ವ ಅತಿಥಿ ಅಸಿಸ್ಟೆಂಟ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ರಾಘವೇಂದ್ರ ಅವರು ಸಮಾಜದಲ್ಲಿ ಪೋಕ್ಸೋ ಪ್ರಕರಣಗಳು ಅಧಿಕವಾಗಿದ್ದು,ಕಲಿಕೆಯಲ್ಲಿ ತೊಡಗಬೇಕಾದ ವಿದ್ಯಾರ್ಥಿಗಳು ದುಶ್ಚಟಗಳಲ್ಲಿ ತೊಡಗಿ ಸಮಾಜದ್ರೋಹಿಗಳಾಗುತ್ತಿದ್ದಾರೆ.ಈ ಸಮಯದಲ್ಲಿ ಮಕ್ಕಳಿಗೆ ಕಾನೂನಾತ್ಮಕ ಸಲಹೆಗಳು ಅತೀ ಅಗತ್ಯ ಎಂದರು. ಲೋಕಾಯುಕ್ತ ವಿಭಾಗದ ಜಲಾಲ್,ರವೀಂದ್ರ, ರಮೇಶ್, ಸುಧೀರ್, ರೋಹಿತ್ ಸಹಕರಿಸಿದರು.
ಸಭಾಧ್ಯಕ್ಷತೆಯನ್ನು ಪ್ರಾಂಶುಪಾಲ ನೀಲಾನಂದ ನಾಯ್ಕ್ ವಹಿಸಿದ್ದರು.ಶಿವಣ್ಣ ಬಾಯರ್ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *