ಮೂಳೂರ್ ಭಾರತ್ ಕ್ರೆಡಿಟ್ ಸೌಹಾರ್ದ ಸಹಕಾರಿ ರಿ. ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 21 ರಂದು ಪಂಚಮಿ ಕಾಂಪ್ಲೆಕ್ಸ್ ಮೂಳೂರ್ ಆವರಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರಂಜನ್ ಶೆಟ್ಟಿ ಅವರು ಮಾತನಾಡಿ ಸಹಕಾರ ಸಂಘಗಳ ಗ್ರಾಹಕ ಸ್ನೇಹಿ ಸೇವೆಯಿಂದ ಜನರು ಸಹಕಾರ ಸಂಘಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ..ಸಂಸ್ಥೆಯು ಸದೃಢವಾಗಿ ಮುನ್ನೆಡೆಯುತ್ತಿದೆ ಸಂಸ್ಥೆಯು ಸಾಲ ಮಂಜುರಾತಿ,ಮತ್ತು ಇತರ ಉತ್ತಮ ಸೇವೆಯಿಂದ ಸಂಘದ ವ್ಯವಹಾರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಈ ಬಾರಿ ಸಂಘದ ಸದಸ್ಯರಿಗೆ ಶೇ 18% ಡಿವಿಡೆಂಡ್ ಹಂಚಿಕೆ ನೀಡಲಾಗಿದೆ. ಎಂದು ಹೇಳಿದರು. ಸಂಘದ ಒಟ್ಟು ಸದಸ್ಯರು 1200 , ಡೆಪೋಸಿಟ್ 9 ಕೋಟಿ , ವಾರ್ಷಿಕ ವಹಿವಾಟು 25 ಕೋಟಿ , ಸಾಲ 8 ಕೋಟಿ ,ಮಾಜಿ ಸ್ಥಾಪಕ ಅಧ್ಯಕ್ಷ ಡಿ.ಎಂ . ಶೆಟ್ಟಿ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು .
ವೈದ್ಯಕೀಯ ನೆರವು

ಸಂಸ್ಥೆಯ 3 ಸದಸ್ಯರಿಗೆ ಈ ಸಂದರ್ಭದಲ್ಲಿ ನೆರವು ನೀಡಲಾಯಿತು . ಸಂಘದ ಉಪಾಧ್ಯಕ್ಷೆ ದಿನಕರ ಶೆಟ್ಟಿ ಕುರ್ಕಾಲು ನಿರ್ದೇಶಕರುಗಳಾದ ಡಿ . ಎಂ . ಶೆಟ್ಟಿ .ಶ್ರೀಧರ ಶೆಟ್ಟಿ . ವೈ ಪ್ರಫುಲ್ಲ ಶೆಟ್ಟಿ . ಫ್ರಾನ್ಸಿಸ್ ಕುಟಿನ್ನೊ .ಹೇಮಾ ಡಿ.ಶೆಟ್ಟಿ .ರಂಜನಾ ಏಸ್ .ಶೆಟ್ಟಿ ಅಲೆವೂರ್ ಗಣಪತಿ ಕಿಣಿ ವಿಶ್ವನಾಥ್ ಆಚಾರ್ಯ ರಾಶು ಎಸ್ .ಶೆಟ್ಟಿ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ವಾರ್ಷಿಕ ವರದಿ ಮಂಡಿಸಿದರು ಅಧ್ಯಕ್ಷ ರಂಜನ್ ಶೆಟ್ಟಿ ಸ್ವಾಗತಿಸಿದರು ನಿರೂಪಣೆ ಅಪೂರ್ವ ಶೆಟ್ಟಿ ,ವಂದನಾ ಶೆಟ್ಟಿ , ಕುರ್ಕಾಲು ದಿನಕರ್ ಶೆಟ್ಟಿ ವಂದಿಸಿದರು.

