×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳದ ಪ್ರಸೋದ್ಯಮವನ್ನು‌ ನಿರಂತರವಾಗಿ ಹಾಳು ಮಾಡುವ ಕೆಲಸವನ್ನು ಕಾರ್ಕಳದ ಕಾಂಗ್ರೆಸಿಗರು ಮಾಡುತ್ತಿದ್ದಾರೆ – ಶಾಸಕ ಸುನೀಲ್ ಕುಮಾರ್

ಉಡುಪಿ : ಭಾರತೀಯ ಜನತಾ ಪಾರ್ಟಿ ಕಾರ್ಕಳದ ವತಿಯಿಂದ ಭವ್ಯ ಪ್ರವಾಸೋದ್ಯಮವನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಬೇಕು. ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಕಾರ್ಕಳ ಸ್ವರಾಜ್ ಮೈದಾನದಿಂದ ಉಡುಪಿಯ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಬೃಹತ್‌ ವಾಹನ ಜಾಥಾ ನಡೆಯಿತುಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ. ಕಾರ್ಕಳದ ಪ್ರಸೋದ್ಯಮವನ್ನು‌ ನಿರಂತರವಾಗಿ ಹಾಳು ಮಾಡುವ ಕೆಲಸವನ್ನು ಕಾರ್ಕಳದ ಕಾಂಗ್ರೆಸಿಗರು ಮಾಡುತ್ತಿದ್ದಾರೆ ಪರಶುರಾಮ ಮೂರ್ತಿಯ ವಿನ್ಯಾಸ ಬದಲಾಗಬೇಕೆಂದು 2023ರ ಸೆ.29ರಂದು ಶಿಲ್ಪಿ ಕೃಷ್ಣ ನಾಯ್ಕ್ ಅವರು ಡಿಸಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಡಿಸಿ ಅವರು 2023ರ ಅಕ್ಟೋಬರ್ 4ರಂದು ಮೂರ್ತಿಯ ವಿನ್ಯಾಯ ಬದಲಾವಣೆಗೆ ಅನುಮತಿ‌ ಕೊಟ್ಟು ಆದೇಶ ಹೊರಡಿಸಿದ್ದರು. ಜಿಲ್ಲಾಡಳಿತದ ಆದೇಶದಂತೆ ಮೂರ್ತಿಯ ಮರು ವಿನ್ಯಾಸದ ಪ್ರಕ್ರಿಯೆಗಳು ಆರಂಭವಾಗಿತ್ತು. ಆ ನಂತರ ಉದಯ್ ಶೆಟ್ಟಿ ಮತ್ತು ಅವರ ತಂಡ ನಿರಂತರ ಅಪಪ್ರಚಾರದಲ್ಲಿ ತೊಡಗಿದೆ. ಪೊಲೀಸರು ಕೋರ್ಟ್ ಗೆ ಸಲ್ಲಿಸಿದ ಚರ್ಜ್ ಶೀಟ್ ನಲ್ಲಿಯೂ ಪರಶುರಾಮ ಮೂರ್ತಿ ಫೈಬರ್ ನದ್ದು ಅಲ್ಲ ಅಂತಾ ಉಲ್ಲೇಖಿಸಲಾಗಿದೆ. ಅಲ್ಲಿಂದ ಸುಳ್ಳಿನ ಮೆರವಣಿಗೆ ನಿಂತಿದ್ದು, ಸತ್ಯದ ವಿಜಯೋತ್ಸವ ಆರಂಭ ಆಗಿದೆ. ಸುಳ್ಳಿನ ಕಂತೆಯನ್ನು ಹೇಳುತ್ತಾ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಗುಡುಗಿದರು.ನಾನು ಶಾಸಕ, ಸಚಿವನಾಗಿ ಕಾರ್ಕಳವನ್ನು ಅಭಿವೃದ್ಧಿ ಮಾಡಬೇಕೆಂದು ಹಲವು ಯೋಜನೆಗಳನ್ನು ತಂದಿದ್ದೇನೆ. ಆದರೆ, ಈ ಎಲ್ಲ ಯೋಜನೆಗಳನ್ನು ಹಳ್ಳ ಹಿಡಿಸಬೇಕೆಂಬ ಪ್ರಯತ್ನವನ್ನು ಕಾಂಗ್ರೆಸ್ ಪರಶುರಾಮ ಥೀಮ್ ಪಾರ್ಕ್ ಮೂಲಕ ಮಾಡುತ್ತಿದೆ. ಕಾರ್ಕಳಕ್ಕೆ ಉಪಮುಖ್ಯಮಂತ್ರಿ ಬಂದಾಗ ಅವರ ಬಾಯಿಯಲ್ಲಿ ಚುನಾವಣೆಯವರೆಗೂ ಪರಶುರಾಮ ವಿಚಾರ ಇರಲಿ ಎಂದು ಹೇಳಿಸುತ್ತಾರೆ. ಬಿಜೆಪಿ‌ ಅಭಿವೃದ್ಧಿ ಮಾಡಬೇಕೆಂದು ಹೇಳುತ್ತೆ, ಕಾಂಗ್ರೆಸ್ ಅಭಿವೃದ್ಧಿ ನಿಲ್ಲಿಸುತ್ತೆ ಹೇಳುತ್ತೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇರುವ ವ್ಯತ್ಯಾಸ ಎಂದು ಟೀಕಿಸಿದರು. . ಈ ಸಂದರ್ಭದಲ್ಲಿ ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ನಗರಾಧ್ಯಕ್ಷ ರವೀಂದ್ರ ಮೊಯಿಲಿ, ಅಲ್ಪಸಂಖ್ಯಾತ ಮೋರ್ಚಾದ ಮುಸ್ತಫಾ ಜಾರ್ಕಳ, ಭರತ್ ಜೈನ್, ಶೀತಲ್‌ ಜೈನ್, ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷ, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಅಂಥೋನಿ ಡಿಸೋಜಾ ನಕ್ರೆ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಸಂತೋಷ ಪೂಜಾರಿ, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಸಾಲ್ಯಾನ್, ಸದಸ್ಯರಾದ ಆತ್ಮನಂದ, ಸಂತೋಷ ಶೆಟ್ಟಿ, ಬಿಜೆಪಿ ಮುಖಂಡ ಬೋಳ ಶ್ರೀನಿವಾಸ್ ಕಾಮತ್, ಬಿಜೆಪಿ ವಕ್ತಾರ ಹರೀಶ್ ಶೆಣೈ, ಬೋಳ ಜಯರಾಮ್ ಸಾಲ್ಯಾನ್, ಸಾಣೂರ್ ಕರುಣಾಕರ ಪೂಜಾರಿ ಮತ್ತಿತರರು ಇದ್ದರು ಈ ಸಂದರ್ಭದಲ್ಲಿ ಮನವಿ ನೀಡಲಾಯಿತು

Leave a Reply

Your email address will not be published. Required fields are marked *