×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಿಕ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಿಕ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಕೆಮ್ಮಣ್ಣುಸಂತ ತೆರೇಸಾ ಚರ್ಚ್‌ನ ಲಿಟ್ಸ್ ಫ್ಲವ‌ರ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಟಿ. ಸತೀಶ್ ಶೆಟ್ಟಿ ಕೆಮ್ಮಣ್ಣು ಮಾತನಾಡಿ, ಪ್ರಸ್ತುತ ಸಾಲಿನಲ್ಲಿ 506 ಕೋ.ರೂ. ವ್ಯವಹಾರ ನಡೆಸಿದ ಸಂಘವು 162.56 ಲ.ರೂ. ಲಾಭ ಗಳಿಸಿ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲಾಗುವುದು. 78.50 ಕೋ. ರೂ. ಸಾಲ ವಿತರಿಸಿ, 55.22 ಕೋ. ರೂ. ಸಾಲ ವಸೂಲಾತಿ ನಡೆಸಿದ್ದು, ತಗಾದೆಯ 97.07 ವಸೂಲಾತಿ ಪ್ರಗತಿ ಸಾಧಿಸಿದೆ. 102.93 ಕೋ. ರೂ. ಹೊರಬಾಕಿ ಸಾಲ ನೀಡಿದೆ. ಪ್ರಸ್ತುತ ಸಾಲಿನ ಅಂತ್ಯದಲ್ಲಿ ಇರುವಂತೆ ಪಾಲು ಬಂಡವಾಳ 1.55 ಕೋ.ರೂ., ಠೇವಣಿ 123.97 ಕೋ.ರೂ., ನಿಧಿಗಳು 9.58 ಕೋ. ರೂ., 38.24 ಕೋ.ರೂ. ವಿನಿಯೋಗದಲ್ಲಿ ತೊಡಗಿಸಿದ್ದು, ‘ಎ’ ತರಗತಿ ಆಡಿಟ್ ವರ್ಗೀಕರಣ ಪಡೆದಿದೆ. ಸಂಘವು 5 ಶಾಖೆಗಳನ್ನು ಹೊಂದಿದ್ದು, ಪ್ರಧಾನ ಕಚೇರಿ ಕಟ್ಟಡ ಸೇರಿ 3 ಶಾಖೆಗಳು ಸ್ವಂತ ಕಟ್ಟಡವನ್ನು ಒಳಗೊಂಡಿದೆ.ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಾಬಣ್ಣ ಅಮೀನ್, ಪ್ರಭಾಕರ ಬಂಗೇರ, ಶ್ರೀಧರ ಶೆಟ್ಟಿ ವಾರಿಜಾ ನಾಯಕ್, ಲೆಕ್ಕಪರಿಶೋಧಕಿ ಶ್ರೇಯಾ ಶಶಿಧರ್ ಸಾಲ್ಯಾನ್, ಸಾನ್ವಿ ಅವರನ್ನು ಸಮ್ಮಾನಿಸಲಾಯಿತು. ಉಪಾಧ್ಯಕ್ಷಬಿ. ಆಫಲ್ ಸಾಹೇಬ್, ನಿರ್ದೇಶಕರಾದ ಪುರುಷೋತ್ತಮ ಸಾಲ್ಯಾನ್, ಶ್ಯಾಮ ಎನ್. ನೇಜಾರು, ಉಮೇಶ್ ಅಮೀನ್, ಹರೀಶ್ ಶೆಟ್ಟಿ, ರಾಘವೇಂದ್ರ ಪ್ರಸಾದ್, ಟಿ. ಗೋಪಾಲಕೃಷ್ಣ ಹೆಗ್ಡೆ ಅನೀಶ್, ವೆರೋನಿಕಾ ಕರ್ನೇಲಿಯೋ, ಲೇನಿ ಫೆರ್ನಾಂಡಿಸ್, ಲತಾ ಪಿ. ರಾವ್, ಲಕ್ಷ್ಮೀ ಉಪಸ್ಥಿತರಿದ್ದರು. ಸಿಇಒ ಮಹೇಶ್ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿ, ಸಚಿನ್ ರಾವ್, ಕಾರ್ತಿಕ್ ಅಭಿನಂದನ ಪತ್ರ ವಾಚಿಸಿದರು. ಶಾಖಾ ವ್ಯವಸ್ಥಾಪಕರಾದ ಕಿಶೋರ್ ಶೆಟ್ಟಿ ಸ್ವಾಗತಿಸಿ, ನಿರ್ಮಲಾ ವಂದಿಸಿದರು.

Leave a Reply

Your email address will not be published. Required fields are marked *