×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಗಾಂಧಿ ವಿಚಾರಧಾರೆ ತಿಳಿಯದೆ ಪೂಜೆ ಪುಷ್ಪರ್ಚನೆ ಮಾಡಿ ಪ್ರಯೋಜನವಿಲ್ಲ – ಕಿಮ್ಮನೆ ರತ್ನಾಕರ ಹೆಗ್ಡೆ,

ಇಡೀ ವಿಶ್ವಕ್ಕೆ ಗಾಂಧೀಜಿಯವರ ಪ್ರಸ್ತುತತೆ ಹೆಚ್ಚುತ್ತಿದೆ. ಗಾಂಧಿ ತತ್ವ-ಗಾಂಧಿ ವಿಚಾರಧಾರೆ ವಿಚಾರದಲ್ಲಿ ನಾವು ರಾಜಿ ಆಗುವ ಪ್ರಶ್ನೆಯೇ ಇಲ್ಲ ಈ ತಲೆಮಾರಿನ ಯುವ ಸಮೂಹಕ್ಕೆ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಹೆಚ್ಚೆಚ್ಚು ತಲುಪಿಸಬೇಕಿದೆ ಗಾಂಧಿ ವಿಚಾರಧಾರೆಯನ್ನು ತಿಳಿಯದೆ ಗಾಂಧಿಗೆ ಪೂಜೆ ಪುಷ್ಪರ್ಚನೆ ಮಾಡಿ ಪ್ರಯೋಜನವಿಲ್ಲ ಎಂದು ಮಾಜಿ ಸಚಿವರುಗಳಾದ ಶ್ರೀ ಕಿಮ್ಮನೆ ರತ್ನಾಕರ ಹೆಗ್ಡೆ,ಕಾಪು ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾ‌ರ್ ಸೊರಕೆ ಮಾತನಾಡಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ‘ಗಾಂಧಿ ಭಾರತ ಕಾರ್ಯಕ್ರಮ ಮಾಡುವ ಉದ್ದೇಶ ಬರೀ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಲ್ಲ ಬದಲಾಗಿ ಸಂವಿದಾನದ ಬಗ್ಗೆ ಸಮಾಜದಲ್ಲಿ ಜನರಿಗೆ ತಿಳುವಳಿಕೆ ಮೂಡಿಸುದಾಗಿದೆ ನಮ್ಮ ರಾಷ್ಟ್ರದ ಸಂವಿದಾನವೇ ನಮ್ಮ ಸಿದ್ಧಾಂತ ದೇಶದ 140 ಕೋಟಿ ಜನರನ್ನು ಒಗ್ಗೂಡಿಸುವ ಶಕ್ತಿ ನಮ್ಮ ಸಂವಿದಾನ ಕ್ಕೆ ಇದೆ ಕೇಂದ್ರದ ಆಡಳಿತರೂಡ ಪಕ್ಷ ಸಂವಿದಾನವನ್ನು ಶಿಥಿಲ ಮಾಡುವ ಅನೇಕ ರೀತಿಯ ಪಕ್ರಿಯೆ ಮಾಡುತಿದ್ದೆ ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಜೆ ಆರ್ ಲೋಬೋ, ಅಬ್ದುಲ್ ಮುನೀರ್ ಜನ್ಸಾಲೆ, ಗಾಂಧಿಜಿ ಯವರ ಅಹಿಂಸಾ ತತ್ವ ಮತ್ತು ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾದ್ಯಕ್ಷರಾದ ಎಂ ಎ ಗಫೂ‌ರ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ವೈ ಸುಕುಮಾ‌ರ್,ನವೀನ್ ಚಂದ್ರಸುವರ್ಣ, ಶರ್ಫುದ್ದೀನ್ ಶೇಖ್‌, ದಿವಾಕ‌ರ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಮೆಲ್ವಿನ್ ಡಿಸೋಜ, ವಿಲ್ಸನ್ ರೋಡ್ರಗೀಸ್,ಗಣೇಶ್ ಕೋಟಿಯನ್ ಡಾ. ಫಾರೂಕ್ ಚಂದ್ರನಗರ,ದೇವರಾಜ್ ಕಾಪು ರಿಯಾಜ್ ಮುದರಂಗಡಿ, ಸೌರಬ್ ಬಲ್ಲಾಲ್, ಅಮೀ‌ರ್ ಮೊಹಮ್ಮದ್, ಹಸನಬ್ಬ ಶೇಖ್ ಇನ್ನಿತರ ಅನೇಕ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *