×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ : ಹೈನುಗಾರರ ಪರಿವಾರ ಒಕ್ಕೂಟ ಸಂವಾದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಅಭಿನಂದನೆ ಕಾರ್ಯಕ್ರಮ

ಉಡುಪಿ: ಹೈನುಗಾರರ ಪರಿವಾರ ಒಕ್ಕೂಟ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಂವಾದ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭ ನಗರ ಪುರಭವನದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು,ದಕ್ಷಿಣಕನ್ನಡ ಜೀಲ್ಲೆಯ ಎಲ್ಲಾ ಸಹಕಾರಿಗಳಿಗೆ ಒಂದು ವಿಶೇಷವದಂತ ಗೌರವ ಕರ್ನಾಟಕ ರಾಜ್ಯದಲ್ಲಿದೆ ಹಿಂದೆ ಸರಕಾರದಿಂದ ವಿಶೇಷ ಅನುದಾನ ಕೊಡುವಂತೆ ಮನವಿಮಡ್ಡಿದೆ ಹಾಲು ಉತ್ಪಾದಿಸುವ ವೆಚ್ಚ ಜಾಸ್ತಿ ಇರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನುದಾನ ಕೊಡಬೇಕೆಂದು ಸಹಕಾರಿ ಸಚಿವರಲ್ಲಿ ಮನವಿ ಮಾಡಲಾಗಿತ್ತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಶೇಡಿಕೊಡು ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಜಗದೀಶ ಕಾರಂತ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ್ ಕೋಟ್ಯಾನ್, ನಿರ್ದೇಶಕರಾದ ದೇವಿ ಪ್ರಸಾದ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಪ್ರಕಾಶ್ ಚಂದ್ರ ಶೆಟ್ಟಿ, ಸುಧಾಕರ್ ಶೆಟ್ಟಿ, ಹದ್ದೂರು ಸುಚರಿತ ಶೆಟ್ಟಿ, ಮಮತಾ ಶೆಟ್ಟಿ, ಪ್ರಾಥಮಿಕ ಹಾಲು ಉತ್ಪಾದಕರ ನೌಕರರ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಸುಲೇಖಾ ಶೆಟ್ಟಿ ಕೈಲ್ಕೆರೆ ಉಪಸ್ಥಿತರಿದ್ದರು

ಸ್ವಾಗತ ವಿಠಲ ಶೆಟ್ಟಿ ಶೇಡಿಕೊಡು ನಿರೂಪಣೆ ಸುಜಾತಾ ಬಾಯಿರಿ ಕೋಟ ಧನ್ಯವಾದ ರಾಘವೇಂದ್ರ ಕೊಮೆ ನೆರೆವೆರಿಸಿದರು

Leave a Reply

Your email address will not be published. Required fields are marked *