ಸಂಸ್ಕೃತಿ ಈವೆಂಟ್ಸ್ ಪ್ರಸ್ತುತಿ ಅನಿಲ್ ಕುಮಾರ್ ಕಾಪು ಸಾರಥ್ಯದಲ್ಲಿ ಜುಲೈ 25, 26, 27 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಕಾಪು ಹಳೆ ಮಾರಿಗುಡಿ ಸಭಾಗೃಹದಲ್ಲಿ ಕಾಪು: ಬೃಹತ್ ಹಲಸು ಮಾರಾಟ ಮೇಳಕ್ಕೆ ಶುಕ್ರವಾರ ಕಾಪು ತಹಶೀಲ್ದಾರ್, ಪ್ರತಿಭಾ ಆರ್ ಚಾಲನೆ ನೀಡಿದರು ನಂತರ ಮಾತನಾಡಿ ಇದೊಂದು ವಿಶೇಷ ಮೇಳವಾಗಿದ್ದು ಸ್ಥಳೀಯ ವರ್ತಕರನ್ನು ಗುರುತಿಸಿ ಪ್ರೊಸಹಿಸುದರೊಂದಿಗೆ ವ್ಯಾಪಾರ ಒದಗಿಸುವುದು ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ಇಂಥ ಮೇಳ ಹೆಚ್ಚೆಚ್ಚು ನಡೆಯಬೇಕು’ ಎಂದರು ಈ ಮೇಳದಲ್ಲಿ ನಾಗು ಹಲಸು, ನಂದು ಹಲಸು, ಶಂಕರ ಹಲಸು, ರುದ್ರಾಕ್ಷಿ ಹಲಸು, ಚಂದ್ರ ಹಲಸು ಮುಂತಾದ ರುಚಿ ರುಚಿಯಾದ ಹಲಸಿನ ಹಣ್ಣು ಗಳು ಗುಬ್ಬಿ, ತುಮಕೂರು, ದೊಡ್ಡಬಳ್ಳಾಪುರ, ಉಪ್ಪಿನಂಗಡಿ, ಕುಂದಾಪುರ ಮುಂತಾದ ಪ್ರದೇಶಗಳಿಂದ ಬರಲಿವೆ. ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಹಲ್ವಾ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಪತ್ರೊಡೆ, ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಆಭರಣ ಗಳು, ಉಡುಪಿ ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಜರುಗಲಿದೆ ಈ ಸಂದರ್ಭದಲ್ಲಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು, ಶ್ರೀ ವಾಸುದೇವ ಶೆಟ್ಟಿ, ಅಧ್ಯಕ್ಷರು, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಕಾಪು, ಶ್ರೀ ನವೀನ್ ಶೆಟ್ಟಿ ಕುತ್ಯಾರು ಪ್ರಗತಿಪರ ಕೃಷಿಕರು ಯೋಗೀಶ್ ಶೆಟ್ಟಿ ಉದ್ಯಮಿ, ಕಾಪು, ಶ್ರೀ ವೈ ಸುಕುಮಾರ್, ನವರಂಗ್ ಗ್ರೂಪ್, ಪಡುಬಿದ್ರಿ, ಶ್ರೀ ಉದಯ್ ಶೆಟ್ಟಿ ಇನ್ನ,ಉದ್ಯಮಿ, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು ರತ್ನಾಕರ್ ಇಂದ್ರಾಳಿ ಸ್ವಾಗತಿಸಿದರು ಅನಿಲ್ ಕುಮಾರ್ ವಂದಿಸಿದರು.


