×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರೋಟರಿ ಕ್ಲಬ್ ಶಿರ್ವ ಪದಪ್ರಧಾನ ಸಮಾರಂಭ

ಶಿರ್ವ ರೋಟರಿ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರೋಟರಿ ಸಭಾ ಭವನ ಬಂಟಿಕಲ್ ಸಭಾಂಗಣದಲ್ಲಿ ನಡೆಯಿತು.ಲ| ಅಲ್ವಿನ್ ಕ್ಯಾಡ್ರಸ್ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಸಿದರು. ಅವರು ಈ ಸಂದರ್ಭ ಮಾತನಾಡಿ ರೋಟರಿ ಒಂದು ಸಂಘಟನೆಯಲ್ಲ ಅದು ಸಮಾನ ಮನಸ್ಕರ ಸಮರ್ಪಣಾ ಮನೋಭಾದಿಂದ ಕೂಡಿದ ಸಮಾಜದಲ್ಲಿ ಸೇವಾ ಕಾರ್ಯದಿಂದ ಧನಾತ್ಮಕ ಬದ್ಧತೆಯಿಂದ ಕೂಡಿದ ವ್ಯಕ್ತಿಗಳ ಒಂದು ಜಾಗತಿಕ ಸಮಾಜ ಎಂದರು ನೂತನ ಅಧ್ಯಕ್ಷ ಪ್ರವಿಲಿಯಂ ಮಚಾದೊ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ನಡೆಯುವ ಸಮಾಜಮುಖಿ ಕಾರ್ಯಗಳಲ್ಲಿ ಸಂಘದ ಎಲ್ಲಾ ಸದಸ್ಯರು ನನ್ನೊಂದಿಗೆ ಕೈಜೊಡಿಸುವಂತೆ ವಿನಂತಿಸಿಕೊಂಡರು ನಿರ್ಗಮನ ಅಧ್ಯಕ್ಷ ಅಮಿತ್ ಆರಾನ್ಹ ಮಾತನಾಡಿ, ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದ್ದು, ಮುಂದಿನ ಅಧ್ಯಕ್ಷರಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಪೂರ್ವ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿಸನ್ಮಾನಿಸಿ ಅಭಿನಂದಿಸಲಾಯಿತು. ಅಮಿತ್ ಆರಾನ್ಹ ಸ್ವಾಗತಿಸಿದರು ಧನ್ಯವಾದ ಹೋನಯ್ಯ ಶೆಟ್ಟಿಗಾರ್ ವಿಠಲ್ ನಾಯಕ್ ಜೆ. ಕೆ ಆಳ್ವ ಡಾ ಅರುಣ್ ಹೆಗ್ಡೆ ಸಂದೀಪ್ ಬಂಗೇರ ವಿಗ್ನೇಶ್ ಶೆಣೈ ಹೆರಾಲ್ಡ್ ಕೂಟಿನ್ಹ ಪುಂಡಲೀಕ ಮರಾಠ ರಾಫಾಯಲ್ ಮಾತಾಯಸ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *