×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೆದಿಂಜೆ ಮಂಜರಪಲ್ಕೆ ಪಕಲ ಚರ್ಚ್ ಲೋಕಾರ್ಪಣೆ

ಬೆಳ್ಳನ್, ಜೂ. 10: ತಾಲೂಕಿನಕೆದಿಂಜೆ ಮಂಜರಪಲ್ಕೆಯಲ್ಲಿ ನೂತನ ವಾಗಿ ನಿರ್ಮಾಣ “ಗೊಂಡ ಕಾರಣಿಕ ಕ್ಷೇತ್ರ ಪಕಲ ಸಂತ ಅಂತೋನಿ ಶೈನ್ ಚರ್ಚ್‌ನ ಲೋಕಾರ್ಪಣೆ ಮಂಗಳವಾರ ನಡೆಯಿತು. ಮಂಗಳೂರು ಧರ್ಮ ಪ್ರಾಂತದ ನಿಕಟಪೂರ್ವ ಬಿಷಪ್ ರೈ| ರೆ| ಡಾ। ಅಲೋಶಿಯಸ್ ಪಾವ್ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಮಾತ ನಾಡಿ, ಸಂತ ಅಂತೋನಿಯವರಭಕ್ತಿಯ ಪ್ರತೀಕವಾಗಿ ಇದು ಸಾಧ್ಯವಾಯಿತು. ಸಂತ ಅಂತೋನಿ ಎಲ್ಲರ ಪವಿತ್ರ ದೇವರಾಗಿದ್ದಾರೆ ಮತ್ತು ಅನುಗ್ರಹ ನೀಡುವವರಾಗಿದ್ದಾರೆ ಚರ್ಚ್‌ನ ಪ್ರಧಾನ ಧರ್ಮ ಗುರು ವಂ। ಫೆಡ್ರಿಕ್ ಮಸ್ಕರೇನ್ಹಸ್, ಉಡುಪಿ ಧರ್ಮ ಪ್ರಾಂತದ ಬಿಷಪ್ ರೈ1 ರೆ! ಡಾ| ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವಾದ ನೀಡಿದರು. ಅಲಹಾಬಾದ್‌ನ ಬಿಷಪ್ ರೈ1 ರೆ! ಡಾ। ಲೂವಿಸ್ ಮಸ್ಕರೇನಸ್, ಶಿವ ಮೊಗ್ಗದ ಬಿಷಪ್ ರೈ1 ರೆ। ಡಾ| ಫ್ರಾನ್ಸಿಸ್ ಸೆರಾವೋ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ನಂದಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಸಹಾಯಕ ಧರ್ಮಗುರು ಒಸ್ಟಾಲ್ಡ್ ಗ್ರೆಗೊರಿ ಮಿನೇಜಸ್, ಸಮಿತಿಯ ಡೊಮಿನಿಕ್ ಮರೀನಾ ಡಿಸೋಜಾ, ಅಂದ್ರಾದೆ, ಅರ್ನಾಲ್ಡ್ ಡಿಸೋಜಾ, ಜಾನೆಟ್, ಹೆರಾಲ್ಡ್‌ ಡಿಮೆ ಲ್ಲೋ, ದೊರೊತಿ ಪಿಂಟೋ, ಪ್ರಾನ್ಸಿಸ್ ಡಿಸೋಜಾ ಮತ್ತಿತರರಿದ್ದರು.

ನೂತನ ಚರ್ಚ್ ನಿರ್ಮಾಣಕ್ಕೆ ಸಹಕರಿಸಿದ ಮಹಾದಾನಿಗಳನ್ನು ಗೌರ ವಿಸಲಾಯಿತು. ಕಾಮಗಾರಿ ನಡೆಸಿದ ವರನ್ನು ಗುತ್ತಿಗೆದಾರರರನ್ನು ಎಂಜಿನಿ ಯರ್‌ರವನ್ನು, ಗೌರವಿಸಲಾಯಿತು. ಪ್ರಧಾನ ಧರ್ಮಗುರು ವಂ। ಫೆಡ್ರಿಕ್ ಮಸ್ಕರೇನ್ಹಸ್ ಸ್ವಾಗತಿಸಿದರು. ಚರ್ಚ್ ಉಪಾಧ್ಯಕ್ಷ ಗ್ರೆಗೊರಿ ಮಿನೇಜಸ್ ಪ್ರಸ್ತಾವನೆಗೈದರು. ವಂ| ಅರ್ನಾಲ್ಡ್ ಮಥಾಯಸ್ ದಾನಿಗಳ ವಿವರ ನೀಡಿದರು. ಜಾನೆಟ್ ಡಿಮೆಲ್ಲೋ ವಂದಿಸಿದರು. ವಂ। ಡೆನಿಸ್ ಡೇಸ ವಂದಿಸಿದರು

Leave a Reply

Your email address will not be published. Required fields are marked *