ಕನ್ನರ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಪುನರ್‌ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಹಾಗೂ ಪರಿವಾರ ದೈವಗಳ ಕೋಲದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ನಾಗಸ್ವರ ವಾದಕ ಹಿದಾಯಿತುಲ್ಲಾ ಸಾಹೇಬ್ ಎರ್ಮಾಳ್ ಸನ್ಮಾನಿಸಲಾಯಿತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಯಶಪಾಲ್ ಸುವರ್ಣ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಗ್ರಾ.ಪಂ. ಅಧ್ಯಕ್ಷ ಜಯಕರ ಸೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ ಒಡ್ಡಾಡಿ, ಪುರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿ ವೀರಭದ್ರ ದೇವಸ್ಥಾನ ದೇವಸ್ಥಾನದ ಆಡಳಿತ ಮೊಕೇಸರ ಪ್ರಭಾಶಂಕರ ಪದ್ಮಶಾಲಿ, ಉಡುಪಿ ಸಾಫಲ್ಯ ಟ್ರಸ್ಟ್‌ನ ಪ್ರವರ್ತಕಿನಿರೂಪಮಾ ಪ್ರಸಾದ್ ಶೆಟ್ಟಿ ಕಡೆಕಾರು ಕನ್ನರ್ಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಂಕರ ಜಿ. ಸುವರ್ಣ, ಉಡುಪಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಬೈಲೂರು ಗುರಿಕಾರ ಕೀರ್ತಿ ಕುಮಾರ್, ಸುಜನ್ ಶೆಟ್ಟಿ ಒಡ್ಡಾಡಿ, ಸದಾನಂದ ಪೂಜಾರಿ, ವಿಠಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಗರೋಡಿಯ ಹಿರಿಯ ಸೇವಕ ತೋಮ ಪೂಜಾರಿ ಹೆರ್ಗ,ಗರೋಡಿಯ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷಸಂಜೀವ ಎ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸುವರ್ಣ ಪ್ರಸ್ತಾವನೆಗೈದರು. ದಯಾನಂದ ನಿರೂಪಿಸಿದರು. ಉಗ್ಗೆಲ್‌ಬೆಟ್ಟು ಕಾರ್ಯದರ್ಶಿ ಸುರೇಶ್ ಮೆಂಡನ್ ವಂದಿಸಿದರು.

