×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ನಿಯೋಗದಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ನಿಯೋಗದಿಂದ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿಯೋಗವು ಉಡುಪಿ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಉಲ್ಲೇಖಿಸಿ, ನೂತನ ಪೊಲೀಸ್ ವರುಷ್ಠಾಧಿಕಾರಿ ಅವರ ಅವಧಿಯಲ್ಲಿ ಇಲ್ಲಿನ ಕಾನೂನು ಸುವ್ಯವಸ್ಥೆ ಮತ್ತಷ್ಟು ಉತ್ತಮಗೊಳ್ಳಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನೂತನ ಎಸ್ಪಿಯವರು ವಿಶಿಷ್ಟ ಕಾಳಜಿ ವಹಿಸಬೇಕು. ಡ್ರಗ್ಸ್, ಗಾಂಜಾ ದಂಧೆಯ ವಿರುದ್ಧ ಸೂಕ್ತ ಕಾರ್ಯಾಚರಣೆ ನಡೆಸುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ನಿಯೋಗದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲ, ಸಂಯುಕ್ತ ಸುನ್ನಿ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕ‌ರ್ ನೇಜಾರು, ರಫೀಕ್ ಕುಂದಾಪುರ, ಉಡುಪಿ ಜಿಲ್ಲಾ ವಕ್ಸ್ ಬೋಡ್ ನ ಮಾಜಿ ಜಿಲ್ಲಾಧ್ಯಕ್ಷರಾದ ನಕ್ಸಾ ಯಹ್ಯಾ ರಿಯಾಝ್ ಕೋಡಿ, ಇಸ್ಮಾಯಿಲ್ ಕಟಪಾಡಿ, ಅಮೀ‌ರ್ ಹಂಝಾ,ಜಮಾಅತೆ ಇಸ್ಲಾಮಿ ಹಿಂದ್‌ನ ಇಬ್ರಾಹಿಮ್ ಕಿದೆವರ್ ಹೂಡೆ, ಸಯ್ಯದ್ ಫರೀದ್ ಶೇಖ್, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಸಾಲಿಡಾರಿಟಿ ರಾಜ್ಯ ಕಾರ್ಯದರ್ಶಿ ಅಫ್ಘಾನ್ ಹೂಡೆ, ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *