×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಶ್ಮೀರ ಉಗ್ರರ ದಾಳಿ- ಶರ್ಪುದ್ದೀನ್ ಶೇಖ್ ಖಂಡನೆ

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಿನ್ನೆ ನಡೆದ ಉಗ್ರರ ದಾಳಿಯಲ್ಲಿ ಅಮಾಯಕ ಮುಗ್ಧ 27 ಜನರು ಬಲಿಯಾಗಿದ್ದು ತೀವ್ರ ದುಃಖದ ವಿಚಾರ. ಇಂಥ ಹೀನ ಕೃತ್ಯದ ಹಿಂದೆ ಯಾರೇ ಇರಲಿ ಅಥವಾ ಎಷ್ಟೇ ದೊಡ್ಡ ಶಕ್ತಿ ಇರಲಿ ಅದನ್ನು ಮಟ್ಟ ಹಾಕಲೇಬೇಕಿದೆ. ಈ ವಿಚಾರದಲ್ಲಿ ಜಾತಿ ಧರ್ಮ ಪಕ್ಷ ಭೇದವಿಲ್ಲದೆ ಎಲ್ಲರೂ ಒಂದಾಗಿ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ದರಿದ್ದೇವೆ. ಉಗ್ರವಾದಕ್ಕೆ ಧರ್ಮವಿಲ್ಲ. ಯಾವುದೇ ಧರ್ಮ ಅದನ್ನು ಪ್ರತಿಪಾದಿಸುವುದೂ ಇಲ್ಲ. ಅದೊಂದು ಅಧರ್ಮದ ಮಾರ್ಗ. ದೇಶದ ಸಾಮರಸ್ಯ ಪರಂಪರೆ ಹಾಳುಗೆಡಿಸುವ ಉದ್ದೇಶದ ಕಿಡಿಗೇಡಿಗಳ ಹೇಡಿತನದಿಂದ ಕೂಡಿದ ಕೃತ್ಯ ಇದು. ಕೇಂದ್ರ ಸರ್ಕಾರ ಈ ಕೂಡಲೇ ಇದರ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಭದ್ರತಾ ವೈಫಲ್ಯದಿಂದಾದ ಇಂಥ ಕೃತ್ಯ ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ವಿಚಾರದಲ್ಲಿ ವಿಳಂಬ ನೀತಿ ಸಲ್ಲದು. ನಾಗರೀಕರು ಮತ್ತು ಪ್ರವಾಸಿಗಳ ರಕ್ಷಣೆಯನ್ನು ಕೇಂದ್ರ ಸರ್ಕಾರ ಪ್ರಥಮ ಆದ್ಯತೆಯಾಗಿಸಬೇಕು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದೇವೆ ಎಂದು ಪೊಳ್ಳು ಭರವಸೆ ನೀಡುತ್ತಾ ಕಾಲಹರಣ ಮಾಡಬಾರದು ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹತ್ಯಾಕಾಂಡವನ್ನು ತೀವೃವಾಗಿ ಖಂಡಿಸಿದ್ದಾರೆ.

Leave a Reply

Your email address will not be published. Required fields are marked *