ಕಾಪು ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಸಮಿತಿ, ಕಾಪು ಬ್ಲಾಕ್ ಯುವಕಾಂಗ್ರೆಸ್ ಸಮಿತಿ ಇವರ ನೇತೃತ್ವದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಯು ಕಾಪು ರಾಜೀವ ಭವನದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಮಾತನಾಡಿ ಡಾ ಬಿ ಅರ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಕೊಟ್ಟಿರುವ ಸಂವಿಧಾನ ದ ಕೊಡುಗೆ ಏನೆಂದು ಸವಿವರವಾಗಿ ತಿಳಿಸಿದರು. ದಲಿತ ಮುಖಂಡರಾದ ಉಮನಾಥ್ ರವರು ಮಾತನಾಡಿ ಯುವಕರಿಗೆ ಸಂವಿಧಾನದ ಮೌಲ್ಯ ಏನೆಂದು ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಪಿ ಯು ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10 ನೇ Rank ಗಳಿಸಿದ ಆನ್ಯಾ ರವಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಮೊಹಮ್ಮದ್ ನಿಯಾಜ್ ಅಧ್ಯಕ್ಷರು ಕಾಪು ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಕಾಪು ಬ್ಲಾಕ್ ದಕ್ಷಿಣ ಯುವಕಾಂಗ್ರೆಸ್ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್,ನವೀನ್ ಎನ್ ಶೆಟ್ಟಿ, ಕಾರ್ಯದರ್ಶಿ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ, ದಲಿತ ಮುಖಂಡರು ಉಮನಾಥ್ ಪಡುಬಿದ್ರಿ, ದಲಿತ ಮಹಿಳಾ ಮುಖಂಡರು ವಸಂತಿ. ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ,ಕಾಪು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಾಂತಲತಾ ಶೆಟ್ಟಿ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಸನಬ್ಬ ಶೇಕ್, ತಾ.ಪಂ ಮಾಜಿ ಅಧ್ಯಕ್ಷರಾದ ಶೇಕಬ್ಬ , ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು .ಈ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಲಾಯಿತು ಹಾಗೂ ಸಂವಿಧಾನ ಪೀಠಿಕೆಯನ್ನು ಓದಲಾಯಿತು


