ಕಾರ್ಕಳ: ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ, ವಿರುದ್ಧ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ಮುನಿಯಲು ಉದಯ್ ಕುಮಾರ್ ಶೆಟ್ಟಿ ಕೇಂದ್ರ ಸರಕಾರ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಯುಪಿಎ ಸರಕಾರ ಇದ್ದಾಗ 400 ರೂ ಇದ್ದ ಗ್ಯಾಸ್ ಬೆಲೆ ಈಗ 1000 ರೂ ದಾಟಿದೆ. ರಾತ್ರೋರಾತ್ರಿ ಅಡುಗೆ ಅನಿಲ ಬೆಲೆಯನ್ನು 50 ರೂ ಏರಿಕೆ ಮಾಡಿದ್ದಾರೆ. ಅದರೊಂದಿಗೆ ಪೆಟ್ರೋಲ್ ಡಿಸೇಲ್ ಬೆಲೆಯನ್ನು 2 ರೂ ಏರಿಸಲಾಗಿದೆ.ಕಾಂಗ್ರೆಸ್ ಸರಕಾರಮಹಿಳೆಯರ ಸಾಮಾಜಿಕ, ಆರ್ಥಿಕ ಸ್ವಾವಲಂಬನೆಯ ಬದುಕಿಗಾಗಿ ಗ್ಯಾರಂಟಿ ನೀಡಿದೆ. ಕೇಂದ್ರ ಸರಕಾರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗ ಹಾಗೂ ಮಹಿಳೆಯರ ಬದುಕನ್ನು ದುಸ್ತರಗೊಳಿಸಿದೆ ಎಂದರು ಕಾರ್ಕಳ ವಿಧಾನಸಭಾ ಅಧ್ಯಕ್ಷರಾದ ಸೂರಜ್ ಶೆಟ್ಟಿ ಮಾತನಾಡಿ ಕೇಂದ್ರ ಬಿಜೆಪಿ ಸರಕಾರ ಸಾಮಾನ್ಯ ಜನರ ಬದುಕು ನರಕವನ್ನಾಗಿ ಮಾಡಿದೆ ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಯಲ್ಲ ಜನ ವಿರೋಧಿ ಸರಕಾರ ಎಂದು ಹೇಳಿದರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಪ್ರತಿಭಟಣಾ ಸಭೆ ಯನ್ನು ಉದ್ದೇಶಿಸಿ ಮಾತನಾಡಿದ ಅವರು ಯುವ ಕಾಂಗ್ರೆಸ್ ಜನರಿಗೆ ತೊಂದರೆ ಆದಾಗ ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಸಂಘಟನೆ ಯಾಗಿದೆ ಹಾಲಿನ ದರ ಕೇವಲ ಎರಡು ರೂಪಾಯಿ ಏರಿಕೆ ಯಾಗಿದ್ದು ಬಿಜೆಪಿ ಯವರು ರಾಜ್ಯಾದಂತ್ಯ ಜನಕ್ರೋಶ ಪ್ರತಿಭಟನೆ ಮಾಡುತಿದ್ದು ಅದೇ ಬಿಜೆಪಿ ಕೇಂದ್ರ ಸರಕಾರ ಗ್ಯಾಸ್ ಬೆಲೆ 50 ರೂ. ಏರಿಕೆ ಮಾಡಿದ್ದು ಇದನ್ನು ಪ್ರತಿಭಟನೆ ಮಾಡುವವರು ಯಾರು ಎಂದು ಪ್ರಶ್ನಿಸಿದರು ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ವಕ್ತಾರರಾದ ಬಿಪಿನ್ ಚಂದ್ರ ಪಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಜೋಗಿ ಹಾಗೂ ಯೋಗೇಶ್ಆಚಾರ್ಯ ಇನ್ನ, ಯುವ ಕಾಂಗ್ರೆಸ್ ಕಾರ್ಕಳ ವಿಧಾನಸಭಾ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲಿಕ್ ಅತ್ತೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಭಾನು ಭಾಸ್ಕರ್, ನಗರ ಮಹಿಳಾ ಅಧ್ಯಕ್ಷರಾದ ರೀನಾ ಜೂಲೀಟ್ ಹಾಗೂ ಬ್ಲಾಕ್ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಪದಾಧಿಕಾರಿಗಳು, NSUI ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

