×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ತೈಲ, ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಉಡುಪಿ ಅಜ್ಜರಕಾಡು ಮಹಾತ್ಮ ಗಾಂದಿ ಸ್ಮಾರಕದ ಬಳಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿಭಟನಕಾರರು ಸ್ಥಳದಲ್ಲೇ ಸೌದೆ ಒಲೆ ಮೂಲಕ ಚಹಾ ಮಾಡಿ ಕುಡಿದು ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಅಕ್ರೋಶ ಹೊರಹಾಕಿದರು.

ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದೆ, ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಎಂ ಎ ಗಫೂರ್ ಜನಾಕ್ರೋಶಯಾತ್ರೆ ಯಾರ ವಿರುದ್ಧ ಮಾಡುತ್ತಿರುವಿರ? ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ಡಾಲರ್ ಬೆಲೆ ಭಾರಿ ಕುಸಿತ ಕಂಡಿದ್ದರೂ ಸಹ ಅಡುಗೆ ಅನಿಲ ₹50, ಪೆಟ್ರೋಲ್, ಡೀಸೆಲ್ ಬೆಲೆ ಸಹ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಕಚ್ಚಾ ತೈಲ ಬೆಲೆಯನ್ನು ಭಾರಿ ಕಮ್ಮಿ ಬೆಲೆಗೆ ಖರೀದಿಸುತ್ತಿದ್ದು ಅದರ ಲಾಭವನ್ನು ನೇರವಾಗಿ ಗ್ರಾಹಕರಿಗೆ ನೀಡಬೇಕಾಗಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರ ಅಬಕಾರಿ ಸುಂಕವನ್ನು ₹2 ಜಾಸ್ತಿ ಮಾಡಿ ಅದರ ಲಾಭವನ್ನು ಸರ್ಕಾರಕ್ಕೆ ಪಡೆದುಕೊಳ್ಳುತ್ತಿದೆ!!ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮೈಕ್ರೋ ಇಂಡಸ್ಟ್ರಿಯನ್ನು ತಳಮಟಕ್ಕೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರದ ಪಾಲು ಹೆಚ್ಚು ಇದ್ದು, 12 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ನಿರುದ್ಯೋಗವನ್ನೇ ಹೆಚ್ಚಿಸಿದೆ ಎಂದು ಹೇಳಿದರು. ಜನರ ಕಷ್ಟವನ್ನು ಅರಿತು ಐದು ಯೋಜನೆಯನ್ನು ತಂದು ಅವರ ಕಷ್ಟಕ್ಕೆ ಸ್ಪಂದಿಸಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನೇ ಟೀಕಿಸುತ್ತಿದ್ದಾರೆ. 62 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ರೈತರ ಬಡವರ ಕಾಳಜಿಯಿದೆ ಹೊರತು ಉದ್ಯಮಿಗಳ ಸಾಲ ಮನ್ನ ಮಾಡಿ, ರೈತರಿಗೆ, ಮೀನುಗಾರರಿಗೆ ಮೋಸ ಮಾಡಿದ ಬಿಜೆಪಿ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿಯಿಲ್ಲ ಎಂದು ಹೇಳಿದರು. ನಗರ ಸಭಾ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಅಂಜುಮ್, ಗಣೇಶ್ ನರ್ಗಿ, ಹರೀಶ್ ಕಿಣಿ, ಅಬ್ದುಲ್ ಅಝೀಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *