ಉಡುಪಿ, ಫೆ. 11: ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಇವರಸಹ ಸಂಸ್ಥೆನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪಾರಾಮೆಡಿಕಲ್ ಸೈನ್ಸಸ್ ಇದರ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್ ಉದ್ಘಾಟನ ಕಾರ್ಯಕ್ರಮ ಫೆ. 13ರಂದು ಕಿನ್ನಿಮೂಲ್ಕಿ ವೇಗಾಸ್ ಟೌನ್’ ಶಿಪ್‌ನಲ್ಲಿರುವ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಘಟಿಕೋತ್ಸವದಲ್ಲಿ ಗೋವಾ ಮುಖ್ಯಮಂತ್ರಿ ಡಾ। ಪ್ರಮೋದ್ ಸಾವಂತ್ ಅವರು ಉಪಸ್ಥಿತರಿದ್ದು ಪದವಿ ಪ್ರದಾನ ಮಾಡಲಿದ್ದಾರೆ ಮತ್ತು ಹೊಸ ಪಿ.ಜಿ. ಸೆಂಟರನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ| ಎಚ್. ಎಸ್ ಬಲ್ಲಾಳ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರಾಜೀವ ಗಾಂಧಿ ಆರೋಗ್ಯ ವಿ.ವಿ. ಸೆನೆಟ್ ಸದಸ್ಯ ಡಾ| ಯು.ಟಿ ಇಫಿಕರ್ ಅಲಿ ಭಾಗವಹಿಸಲಿದ್ದಾರೆ.

