ಅಡ್ವೆ- ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಅಡ್ವೆ ನಂದಿಕೂರಿನಲ್ಲಿ ನಡೆದ 32 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವಕ್ಕೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಶನಿವಾರ ಚಾಲನೆ ನೀಡಿ ಶುಭ ಹಾರೈಸಿದರು. ಎಲ್ಲೂರು ಗುತ್ತು ವೈ. ಪ್ರಪುಲ್ಲ ಶೆಟ್ಟಿ. ಅಡ್ವೆ ಶ್ರೀ ಮಹಾಗಣಪತಿ ದೇವಸ್ಥಾನದ ಜನ್ನಿ ರವಿಶಂಕರ ಭಟ್, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೆಂಕಟೇಶ ಪುರಾಣಿಕ್, ಅಡ್ವೆ ಗರಡಿ ಮನೆ ರಾಮ ಪೂಜಾರಿ, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಅಧ್ಯಕ್ಷರಾದ ಅಡ್ವೆ ಮೂಡ್ರ ಗುತ್ತು ಸುರೇಶ್ ಶೆಟ್ಟಿ, ಅಡ್ವೆ ಕಂಕಣಗುತ್ತು ಅಶ್ರಿತ್ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಕಾರ್ಯದರ್ಶಿಗಳಾದ ಶಶಿಧರ ಹೆಗ್ಡೆ ಅಡ್ವೆ, ಉದಯ ರೈ ಅರಂತಡೆ, ಕೋಶಾಧಿಕಾರಿಗಳಾದ ಲಕ್ಷ್ಮಣ ಎಲ್ ಶೆಟ್ಟಿ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಜೊತೆ ಕೋಶಾಧಿಕಾರಿಗಳಾದ ಸತೀಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ರವೀಂದ್ರ ಪ್ರಭು ಸಾಂತೂರು, ಶೇಖರ ಶೆಟ್ಟಿ, ಪ್ರವೀಣ್ ಕುಮಾರ್ ಗರಡಿ ಮನೆ, ವಿನೋದ್ ಶೆಟ್ಟಿ, ಸುಧಾಮ ಶೆಟ್ಟಿ, ಸರೋಜಾಕ್ಷ ಶೆಟ್ಟಿ, ಸಂತೋಷ್ ಶೆಟ್ಟಿ, ನಿತಿನ್‌ಕುಮಾರ್, ಭೋಜ ಶೆಟ್ಟಿ, ಸುಧೀರ್ ಕುಮಾರ್ ಅಡ್ವೆ ಉಪಸ್ಥಿತರಿದ್ದರು. ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಕೋಣಗಳ ಸ್ಫರ್ಧೆ ನಡೆಯಿತು.

