ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಎರಡು ದಿನಗಳ ಹಿಂದೆ ಉದ್ಘಾಟಿಸಿದ ತೇಲುವ ಸೇತುವೆ ಇದೀಗ ಮುರಿದು ಹೋಗಿದ್ದು, ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಪ್ರವಾಸಿಗರ ಆಕರ್ಷಣೆಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತೇಲುವ ಸೇತುವೆ ಮಲ್ಪೆಯಲ್ಲಿ ಅಳವಡಿಸಲಾಗಿತ್ತು.ಪ್ರವಾಸಿಗರಿಗೆ 15 ನಿಮಿಷಕ್ಕೆ 100 ರೂ. ಶುಲ್ಕ ಕೂಡ ವಿಧಿಸಲಾಗುತ್ತಿತ್ತು. ನಿನ್ನೆ ಮಲ್ಪೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದರು. ಇಂದು ಸೇತುವೆಯೇ ಮುರಿದು ಬಿದ್ದಿದೆ.

